ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿಂದು ಬರೋಬ್ಬರಿ 56 ಕೊರೊನಾ ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 745ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿನ 56 ಕೊರೊನಾ ಪಾಸಿಟಿವ್ ಕೇಸ್ ಗಳಲ್ಲಿ ದಾವಣಗೆರೆ ಒಂದರಲ್ಲಿಯೇ 41 ಕೇಸ್ ಗಳು ಪತ್ತೆಯಾಗಿವೆ. ಇಂದು 16 ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 560ಕ್ಕೆ ಏರಿಕೆಯಾಗಿದೆ. ಮೂರು ಮಹಿಳೆಯರು ಇಂದು ಮೃತಪಟ್ಟಿದ್ದು. ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನು 158 ಸಕ್ರಿಯ ಪ್ರಕರಣಗಳಿವೆ.
ಇಂದು ಪತ್ತೆಯಾದ 56 ಪ್ರಕರಣಗಳಲ್ಲಿ ದಾವಣಗೆರೆಯಲ್ಲಿ ಅತಿ ಹೆಚ್ಚು 41, ಹರಿಹರ 2,ಜಗಳೂರು 05, ಚನ್ನಗಿರಿ 01,ಹೊನ್ನಾಳಿ 02 ಹಾಗೂ ಹೊರ ಜಿಲ್ಲೆಗಳಿಂದ ಬಂದ 05 ಮಂದಿಯಲ್ಲಿ ಕೊರೊನಾ ಪಾಸಿಟವ್ ಪತ್ತೆಯಾಗಿದೆ. ಇಂದು 35 ವರ್ಷದ ಜಾಲಿನಗರದ ಮಹಿಳೆ, 45 ವರ್ಷದ ಇಮಾಮ್ ನಗರ ಮಹಿಳೆ ಹಾಗೂ 48 ವರ್ಷದ ಹಿರಿಯೂರು ನಿವಾಸಿ ಸಾವನ್ನಪ್ಪಿದ್ದಾರೆ.



