Connect with us

Dvg Suddi-Kannada News

ಸೆ. 8 ರಂದು ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ‘ಬೆಳ್ಳಿ ಬೆಡಗು’ ಕಾರ್ಯಕ್ರಮ

ದಾವಣಗೆರೆ

ಸೆ. 8 ರಂದು ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ‘ಬೆಳ್ಳಿ ಬೆಡಗು’ ಕಾರ್ಯಕ್ರಮ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ಹರ ಸೇವಾ ಸಂಸ್ಥೆ ಮತ್ತು ದಾವಣಗೆರೆ ಜಿಲ್ಲಾ ವೀರಶೈವ ಪಂಚಮಸಾಲಿ ಸಮಾಜ ಸಹಯೋಗದೊಂದಿಗೆ ಸೆ. 8 ರಂದು ನಗರದ ರೇಣುಕ ಮಂದಿರದಲ್ಲಿ, ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ೨೫ ನೇ ವರ್ಷದ ಬೆಳ್ಳಿಯ ಬೆಡಗು ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಿದೆ.

ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಹಗರಿಬೊಮ್ಮನಹಳ್ಳಿಯ ಶಾಖಾ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿ ಡಾ. ಬಿ.ಪಿ. ವೀರಭದ್ರಪ್ಪ, ವೀರಶೈವ ಪಂಚಮಸಾಲಿ ಸಮಾಜ ನಿಕಟಪೂರ್ವ ಅಧ್ಯಕ್ಷ ದಿಂಡೂರು ಭಾಗಿಯಾಗಲಿದ್ದಾರೆ. ಉಪನ್ಯಾಸಕರಾದ ಡಾ. ಬಿ.ಪಿ. ಧನಂಜಯಮೂರ್ತಿ ಹಾಗೂ ಜಗನ್ನಾಥ್ ನಾಡಿಗರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕರ್ನಾಟಕ ರಾಜ್ಯ ಕುಸ್ತಿ ಹಬ್ಬದಲ್ಲಿ ಚಿನ್ನದ ಪದಕ ವಿಜೇತ ಎಸ್.ಎಚ್. ಗೌರಿ ಹಾಗೂ ಬಿಎಸ್ಸಿ ತೋಟಗಾರಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಎಸ್ ವಿದ್ಯಾಶ್ರೀ ಅವರಿಗೆ ಸನ್ಮಾನ ಮಾಡಲಾಗುವುದು. ಇದಲ್ಲದೆ
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಹೆಚ್ಚು ಅಂಕಗಳಿಸಿದ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು.

ಇನ್ನು ಸಮಾಜದ ಗಣ್ಯರಾದ ಬಾದಮಿ ರುದ್ರೇಶ್, ಹುಲಿಕಟ್ಟಿ ಹಾಲೇಶಪ್ಪ, ಅಮರೇಶಪ್ಪ ಬಸಪ್ಪ ಮೈಲೇಶಪ್ಪ, ರಮೇಶ್ ಬಿ, ವೀರಣ್ಣ ರಕ್ಕಸಗಿ ಅವರಿಗೆ ಕೂಡ ಸನ್ಮಾನ ನಡೆಯಲಿದೆ.

ಹರಿಹರದ ಪಂಚಮಸಾಲಿ ಪೀಠದಲ್ಲಿ ನಿತ್ಯ ಅನ್ನ ದಾಸೋಹ, ಪೂಜಾ ಕೈಂಕರ್ಯ ಹಾಗೂ ಕಟ್ಟಡ ಕಾರ್ಯ ನಡೆಯುತ್ತಿವೆ. ಈ ಕಾರ್ಯದ ನಿಧಿಗೆ ಹಣ ಸಂದಾಯ ಮಾಡಲು ಇಚ್ಛಿಸುವವರು : ವೀರಶೈವ ಪಂಚಾಮಸಾಲಿ ಪೀಠ ಟ್ರಸ್ಟ್ ದಾವಣಗೆರೆ, ಎಸ್ ಬಿಐ ಬ್ಯಾಂಕ್ , ದಾವಣಗೆರೆ, ಅಕೌಂಟ್ ನಂಬರ್: ೩೦೬೨೩೯೨೨೯೮೦, ಐಎಫ್ಎಸ್ ಸಿ :ಎಸ್ ಬಿಐಎನ್೦೦೦೫೬೨೪ ಹಣ ಸಂದಾಯ ಮಾಡಬಹುದು.

ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: ೯೮೪೪೪೬೦೩೩೬, ೭೪೮೩೮೯೨೨೦೫

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top