ದಾವಣಗೆರೆ: ನಗರದ ಎಂ.ಸಿ ಕಾಲೋನಿ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ 55,555 ರೂಪಾಯಿಯ ಪರಿಹಾರ ನಿಧಿ ಚೆಕ್ಕನ್ನು ಅಪರ ಜಿಲ್ಲಾಧಿಕಾರಿಯಾದ ಶ್ರೀಮತಿ ಪದ್ಮಾ ಬಸವಂತಪ್ಪನವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಅಂದನೂರು ಮುಪ್ಪಣ್ಣ , ಇಂ ಸಿದ್ದಬಸಪ್ಪ , ಎಸ್ ಎಸ್ ಹುಲ್ಲತ್ತಿ , ಎಸ್.ಎಚ್. ವಸಂತ್ , ಗಡಿಗುಡಾಳು ಮಂಜುನಾಥ್ , ಇಂ ಹಾಲಪ್ಪ , ರವೀಂದ್ರನಾಥ್ ಇನ್ನಿತರ ಸಮಿತಿಯ ಪ್ರಮುಖರುಗಳು ಉಪಸ್ಥಿತರಿದ್ದರು.
