Connect with us

Dvgsuddi Kannada | online news portal | Kannada news online

ಕೆನರಾ ಬ್ಯಾಂಕ್‌ನಿಂದ ಸ್ವ-ಉದ್ಯೋಗ ತರಬೇತಿ

ದಾವಣಗೆರೆ

ಕೆನರಾ ಬ್ಯಾಂಕ್‌ನಿಂದ ಸ್ವ-ಉದ್ಯೋಗ ತರಬೇತಿ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆಯು ಎಲೆಕ್ಟ್ರಿಕಲ್ ಮೋಟರ್ ರಿವೈಂಡಿಂಗ್ ತರಬೇತಿ ೩೦ ದಿನ ಮತ್ತು ಪಂಪ್ ಸೆಟ್ ರಿಪೇರಿ ಮತ್ತು ಹೈನುಗಾರಿಕೆ ಮತ್ತು ಎರೆಹುಳು ಸಾಕಾಣಿಕೆಯ ೧೦ ದಿನಗಳ ತರಬೇತಿಗೆ ಅರ್ಜಿ ಆಹ್ವಾನಿಸಿದೆ.

ಎಲೆಕ್ಟ್ರಿಕಲ್ ಮೋಟರ್ ರಿವೈಂಡಿಂಗ್ ತರಬೇತಿ ಸೆ.೧೨ ಪ್ರಾರಂಭವಾಗಲಿದೆ. ಇನ್ನು ಹೈನುಗಾರಿಕೆ ಮತ್ತು ಎರೆಹುಳು ಸಾಕಾಣಿಕೆ ತರಬೇತಿಯು ಸೆ.೯ ರಿಂದ ಪ್ರಾರಂಭವಾಗಲಿದ್ದು,ತೋಳಹುಣಸೆಯ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ತರಬೇತಿ ನೀಡಲಾಗುವುದು. ನೂರಿತ ತಜ್ಞರಿಂದ ಬೋಧನಾತ್ಮಕ ಮತ್ತು ಪ್ರಯೋಗಿಕವಾಗಿ ತರಬೇತಿ ನೀಡಲಾಗುವುದು.

ಸ್ವಂತ ಉದ್ಯೋಗ ಮಾಡಲ ಇಚ್ಛಿಸುವ ೧೮ ರಿಂದ ೪೫ ಒಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ವಿದ್ಯಾಭ್ಯಾಸ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ. ಗ್ರಾಮೀಣ ಪ್ರದೇಶದ ಸ್ವ-ಸಹಾಯ ಸಂಘದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿ ಸಂಪೂರ್ಣ ಉಚಿತವಾಗಿದ್ದು, ಊಟ, ವಸತಿ ವ್ಯವಸ್ಥೆ ಇರುತ್ತದೆ. ಸ್ವ-ಉದ್ಯೋಗ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಹೆಸರು, ವಿಳಾಸ , ದೂರವಾಣಿ ಸಂಖ್ಯೆಯೊಂದಿಗೆ ಕಚೇರಿ ಸಮಯ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆ ಒಳಗೆ ಭೇಟಿ ನೀಡಬಹುದು.

ವಿಳಾಸ: ನಿರ್ದೇಶಕರು ಮತು ಹಿರಿಯ ವ್ಯವಸ್ಥಾಪಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ದಾವಣಗೆರೆ- 577002, ಹೆಚ್ಚಿನ ಮಾಹಿತಿಗೆ : 79751 39332 ,  72599731172  ಸಂಪರ್ಕಿಸಿ.

ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top