ಡಿವಿಜಿಸುದ್ದಿ.ಕಾಂ:ಪಡ್ಡೆ ಹುಲಿಯಲ್ಲಿ ಲವರ್ಬಾಯ್ ಆಗಿದ್ದ ಶ್ರೇಯಸ್ ಈಗ 2ನೇ ಸಿನಿಮಾ ‘ವಿಷ್ಣುಪ್ರಿಯ’ ಹೊಸ ಗೆಟಪ್ನೊಂದಿಗೆ ಕಾಣಿಸಲಿದ್ದಾರೆ. ಕೇರಳ ಮೂಲದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್, ಶ್ರೇಯಸ್‌ಗೆ ಜೋಡಿಯಾಗಿ ನಟಿಸಲಿದ್ದಾರೆ.
ಪಡ್ಡೆ ಹುಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದ ನಟ ಶ್ರೇಯಸ್ ಮಂಜು 2ನೇ ಸಿನಿಮಾ ‘ವಿಷ್ಣುಪ್ರಿಯ’ವಿಷ್ಣು ಅಭಿಮಾನಿ ಕೆ.ಮಂಜು ತಮ್ಮ ಪುತ್ರನ 2ನೇ ಚಿತ್ರಕ್ಕೆ ವಿಷ್ಣುಪ್ರಿಯ ಎಂದು ಟೈಟಲ್ ಇಟ್ಟಿದ್ದು, ವಿಷ್ಣುವರ್ಧನ್‌ರ ಮೇಲಿನ ಅಭಿಮಾನ ಮೆರೆದಿದ್ದಾರೆ.ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಧಾರವಾಡ ಮೂಲದ ಸಿಂಧು ಶ್ರೀ ಕಥೆ ಬರೆದಿದ್ದಾರೆ.



