ಡಿವಿಜಿಸುದ್ದಿ, ಕಾಂ , ದಾವಣಗೆರೆ: ರಾಜ್ಯ ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿ ಪೋನ್ ಕದ್ದಾಲಿಕೆ ಆಗಿರುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದು, ನನ್ನ ಪೋನ್ ಸಹಿತ ಪ್ರಮುಖ ಸ್ವಾಮೀಜಿಗಳ ಫೋನ್ ಕೂಡ ಕದ್ದಾಲಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ದಾವಣರೆಗೆಯಲ್ಲಿ ಮಾತನಾಡಿದ ಅವರು, ರಂಭಾಪುರಿ ಸ್ವಾಮೀಜಿ, ಒಕ್ಕಲಿಗ ನಿರಂಜನಾ ಸ್ವಾಮೀಜಿ ಸೇರಿದಂತೆ ಪ್ರಮುಖ ಮಠಧೀಶರ ಫೋನ್ ಜೊತೆ ನನ್ನ ಫೋನ್ ಕೂಡ ಕದ್ದಾಲಿಸಲಾಗಿದೆ ಎಂದು ಹಿಂದಿನ ಸಮ್ಮಿಶ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಮಾಡಿದರು.
ನಮ್ಮದು ಫೋನ್ ಕದ್ದಾಲಿಸಿದರೆ ಏನು ಸಿಗುತ್ತೆ, ರಿಯಲ್ ಎಸ್ಟೇಟ್ ಉದ್ಯಮಿಗಳ ಫೋನ್ ಕದ್ದಾಲಿಸಿದೆ ಏನಾದರು ಸಿಗಬಹುದೆಂದು ಕಿಡಿಕಾರಿದರು.



