Connect with us

Dvgsuddi Kannada | online news portal | Kannada news online

ನಿಮಗೆ ಸಕ್ಕರೆ ಕಾಯಿಲೆ, ಅಜೀರ್ಣ ತೊಂದರೆ ಇದ್ಯಾ..? ಈ ಯೋಗಾಸನ ಮಾಡಿ…

ಆರೋಗ್ಯ

ನಿಮಗೆ ಸಕ್ಕರೆ ಕಾಯಿಲೆ, ಅಜೀರ್ಣ ತೊಂದರೆ ಇದ್ಯಾ..? ಈ ಯೋಗಾಸನ ಮಾಡಿ…

-ಜಿ.ಎನ್.ಶಿವಕುಮಾರ

ನಾಟ್ಯ ಮಯೂರಿ’ ಹೆಸರಿನಲ್ಲಿರುವ ‘ಮಯೂರಾಸನ’ದ(mayurasana) ಅಭ್ಯಾಸ ಕ್ರಮ ಹಾಗೂ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ. ಕೊರೋನ ವೈರಸ್(coronavirus)ನಿಂದಾಗಿ ಲಾಕ್ ಡೌನ್(Lockdown)ಆಗಿ ಮಾನವರು ಮನೆಯಲ್ಲಿದ್ದೇವೆ. ವಾಹನ, ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದ ನಗರಗಳು ಸ್ಥಬ್ಧವಾಗಿವೆ. ಕಾಡಿನಿಂದ ನಾಡಿಗೆ ಬಂದಿರುವ ನವಿಲು(Peacock) ಗಳು ಖಾಲಿ ಖಾಲಿ ರಸ್ತೆಗಳಲ್ಲಿ, ಮೈದಾನಗಳಲ್ಲಿ ಸ್ವಚ್ಛಂದವಾಗಿ ಗರಿ ಬಿಚ್ಚಿ ಕುಣಿಯುತ್ತಿವೆ.
ಮನೆಯಲ್ಲಿದ್ದವರಿಗೆ ಸೇವಿಸಿದ ಆಹಾರ ಜೀರ್ಣವಾಗುವುದೂ ಕಷ್ಟವಾಗಿದೆ. ಜಠದ ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಸಕ್ಕರೆ ಕಾಯಿಲೆ(Diabetes) ನಿವಾರಣೆಗೆ ನೆರವಾಗುವ ಮಯೂರಾಸನ(mayurasana)ವನ್ನು ಯೋಗ(yoga) ದಲ್ಲಿ ವಿವರಿಸಲಾಗಿದೆ.

ಹಬ್ಬ ಎಷ್ಟೊಂದು ಸುಂದರ! ಗರಿ ಬಿಚ್ಚಿ ಕುಣಿವ ಈ ನವಿಲಿಗೆ ನಾಟ್ಯವ ಕಲಿಸಿದವರಾರು? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ನವಿಲು ನರ್ತನವನ್ನು ತನ್ನ ಕುಟುಂಬ, ಬಳಗದ ಜತೆಗಿನ ಒಡನಾಡದಿಂದ ಪ್ರಕೃತಿ ಸಹಜವಾಗಿ ಕಲಿಯುತ್ತದೆ. ಎಲ್ಲದಕ್ಕೂ ಮೇಲಾಗಿ ಇದು ನಮ್ಮ ರಾಷ್ಟ್ರ ಪಕ್ಷಿ. ಇದಕ್ಕೆ ಮಯೂರ ಎಂಬ ಇನ್ನೊಂದು ಹೆಸರೂ ಇದೆ. ಇದನ್ನು ಹೋಲುವ ಮಯೂರಾಸನವೂ ಇದೆ.

ಅಭ್ಯಾಸ ಕ್ರಮ:
ನೆಲಕ್ಕೆ ಮಂಡಿಯೂರಿ ಕುಳಿತುಕೊಳ್ಳಿ. ಮುಂದೆ ಭಾಗಿ ಎರಡೂ ಅಂಗೈಗಳನ್ನು ಹಿಮ್ಮುಖಮಾಡಿ(ಬೆರಳುಗಳು ಪಾದದತ್ತ ಮುಖ ಮಾಡಿರಲಿ) ನೆಲಕ್ಕೂರಿ. ಎರಡೂ ಮುಂದೋಳುಗಳನ್ನು ಕೂಡಿಸಿ ಮೊಳಕೈಗಳನ್ನು ಭಾಗಿಸಿ. ಮೊಳಕೈಮೇಲೆ ಹೊಟ್ಟೆಯು, ಹಿಂದೋಳಿನ ಮೇಲೆ ಎದೆಯನ್ನು ಒರಗಿಸಿ. ಮಂಡಿಯನ್ನು ನೆಲದಿಂದ ಬಿಡಿಸಿ ಕಾಲುಗಳನ್ನು ಒಂದೊಂದಾಗಿ ಹಿಂದಕ್ಕೆ ಚಾಚಿ. ತೊಡೆ, ಮಂಡಿ, ಪಾದಗಳನ್ನು ಜೋಡಿಸಿ ಸ್ವಲ್ಪ ಬಿಗಿಗೊಳಿಸಿ. ಉಸಿರನ್ನು ಹೊರಹಾಕಿ ಮುಂಗೈ ಮೇಲೆ ದೇಹದ ಭಾರ ಹಾಕುತ್ತಾ ಕಾಲುಗಳನ್ನು ನಿಧಾನವಾಗಿ ಮೇಲೆತ್ತಿ. ಕಾಲುಗಳು ಹಾಗೂ ದೇಹ ನೆಲಕ್ಕೆ ಸಮವಾಗಿ ಒಂದೇ ನೇರದಲ್ಲಿರುವಂತೆ ಸಮತೋಲನ ಕಾಯ್ದುಕೊಳ್ಳಿ. 30 ಸೆಕೆಂಡುಗಳಿಂದ 1 ನಿಮಿಷದ ವರೆಗೆ ಅಂತಿಮ ಸ್ಥಿತಿಯಲ್ಲಿದ್ದು ಅಭ್ಯಾಸ ನಡೆಸಿ.

ಪ್ರಯೋಜನಗಳು:
*ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಕರುಳಿನಲ್ಲಿನ ವಿಷಾಣುಗಳನ್ನು ತೊಲಗಿಸುತ್ತದೆ.
*ಮಧುಮೂತ್ರ(ಸಕ್ಕರೆ ಕಾಯಿಲೆ) ಪೀಡಿತರಿಗೆ ಅತ್ಯಂತ ಫಲಕಾರಿಯಾದುದು.
*ಕಿಬ್ಬೊಟ್ಟೆಯಲ್ಲಿನ ಆಯೋರ್ಟ ಎಂಬ ಶುದ್ಧ ರಕ್ತನಾಳವನ್ನು ಚಟುವಟಿಕೆಯಿಂದಿರಿಸಿ ಸರಾಗ ರಕ್ತ ಪರಿಚಲನೆಗೆ ಸಹಕಾರಿಯಾಗುತ್ತದೆ.
*ಇಡೀ ದೇಹವನ್ನು ಮುಂಗೈಗಳ ಮೇಲೆ ಸಮತೋಲನ ಕಾಯ್ದು ನಿಲ್ಲಿಸುವುದರಿಂದ ತಾಳ್ಮೆ ವೃದ್ಧಿಸುತ್ತದೆ.
*ಸಾಧನೆಯ ಬಳಿಕ ಪದ್ಮ ಮಯೂರಾಸನ, ಏಕ ಹಸ್ತ ಮಯೂರಾಸನ ಅಭ್ಯಾಸ ಮುಂದುವರಿಸಬಹುದು.

ಮುನ್ನೆಚ್ಚರಿಕೆ:
*ಗರ್ಭಾವಸ್ಥೆಯಲ್ಲಿದ್ದಾಗ ಮತ್ತು ಮಗುವಿಗೆ ಜನನ ನೀಡಿದ ಬಳಿಕ ಮೂರು ತಿಂಗಳು ಮಯೂರಾಸನ ಅಭ್ಯಾಸ ಮಾಡಕೂಡದು.
*ಹರ್ನಿಯಾ ಇದ್ದವರು ಹಾಗೂ ಹೊಟ್ಟೆಯ ಮತ್ತು ಕೈಗಳ ಶಸ್ತ್ರ ಚಿಕಿತ್ಸೆ ಆದವರು ಅಭ್ಯಾಸಕ್ಕೆ ತೊಡಗಕೂಡದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Shivakumara G.N. M.A, B.Ed, YIC
YOGA Instructor, International Yoga Champion
Contact/wp: 94802 25879 Email: shivugn80@gmail.com

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಆರೋಗ್ಯ

To Top