ಡಿವಿಜಿ ಸುದ್ದಿ, ದಾವಣಗೆರೆ: ಬಿಜೆಪಿಯಲ್ಲಿ ಪಂಚಮಸಾಲಿ ಸಮಾಜದ 13 ಶಾಸಕರು, ಒಬ್ಬ ಎಂಎಸ್ಸಿ ಇದ್ದಾರೆ. ಹೀಗಾಗಿ ಕನಿಷ್ಠ 3 ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಆಗ್ರಹಿಸಿದರು.
ಅತಿ ಹೆಚ್ಚು ಶಾಸಕರನ್ನು ನೀಡಿದ ಸಮಾಜ ನಮ್ಮದು. ಈ ಬಾರಿಯ ಉಪ ಚುನಾವಣೆಯಲ್ಲಿ ನಾವು ಮೂರು ಶಾಸಕರನ್ನು ಕೊಡುಗೆ ನೀಡಿದ್ದೇವೆ. ನಮ್ಮ ನ್ಯಾಯಯುತ ಹಕ್ಕನ್ನು ಕೇಳುತ್ತಿದ್ದೇವೆ. ಸಾಮಾಜಿಕ ನ್ಯಾಯ ಕೇಳಿದ್ದೇವೆ ಹೊರತು ಇಕ್ಕಟ್ಟಿಗೆ ಸಿಲುಕಿಸಿಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಸಮಾಜದ ಶಕ್ತಿ ಶಾಲಿಯಾಗಿದ್ದಾರೆ. ರಾಜಕಾರಣದಲ್ಲಿ ಸಚಿವ ಸ್ಥಾನ ಕೇಳುವುದು ತಪ್ಪಿಲ್ಲ. ಇರುವ ಅಧಿಕಾರವನ್ನು ಸಮಾಜದ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು.



