Connect with us

Dvg Suddi-Kannada News

ತರಳಬಾಳು ಶ್ರೀಗಳು ರೈತರ ಬಾಳಿನ ಆಶಾಕಿರಣ: ಮಾಜಿ ಪ್ರಧಾನಿ ದೇವೇಗೌಡ

ಪ್ರಮುಖ ಸುದ್ದಿ

ತರಳಬಾಳು ಶ್ರೀಗಳು ರೈತರ ಬಾಳಿನ ಆಶಾಕಿರಣ: ಮಾಜಿ ಪ್ರಧಾನಿ ದೇವೇಗೌಡ

ಡಿವಿಜಿ ಸುದ್ದಿ, ಹಳೇಬೀಡು

: ಸರ್ಕಾರ ಯಾವುದೇ ಇರಲಿ, ಸದಾ ರೈತರಪರ ಹೋರಾಟ ಮಾಡಿ ಕರೆ-ಕಟ್ಟೆ ತುಂಬಿಸುವ ತರಳಬಾಳು ಶ್ರೀಗಳು ರೈತರ ಬಾಳಿನ ಆಶಾ ಕಿರಣವಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.‌ದೇವೇಗೌಡ ಹೇಳಿದರು.

ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂತರ್ಜಲ ಮಟ್ಟ ಕುಸಿತದ ಕೆಟ್ಟ ಪರಿಸ್ಥಿತಿಯಲ್ಲಿಯೂ ಕೆರೆ -ಕಟ್ಟೆಗಳನ್ನು ತುಂಬಿಸುವಲ್ಲಿ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಕಾರ್ಯ ಶ್ಲಾಘನೀಯ . ಫಸಲ್ ಭೀಮಾ ಯೋಜನೆಯಿಂದ ಯಾವುದೇ ಪ್ರಯೋಜನೆಯಿಂದ ಯಾವುದೇ ಪ್ರಯೋಜವಾಗಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಮೂಲಕ ಸದಾ ರೈತರ ಪರ ಕಾಳಜಿ ಹೊಂದಿದ್ದಾರೆ ಎಂದರು.

ನಾನು ಈ ಕಾರ್ಯಕ್ರಮಕ್ಕೆ ಬರುವುದಕ್ಕಿಂತ ಮುನ್ನ ತುಂಬಾ ಎಚ್ಚರಿಕೆಯಿಂದ ಬಂದಿದ್ದೇನೆ. ಬೇರೆ ಯಾವುದೇ ಕಾರ್ಯಕ್ರಮಕ್ಕೂ ಹೋದರು ಇಷ್ಟೊಂದು ಎಚ್ಚರಿಕೆ ವಹಿಸುವುದಿಲ್ಲ. ಆದರೆ, ಈ ಕಾರ್ಯಕ್ರದಲ್ಲಿ ತುಂಬಾ ಎಚ್ಚರಿಕೆ ವಹಿಸಿದ್ದೇನೆ. ಏಕೆಂದರೆ ಈ ಪೀಠದ ಘನತೆ-ಗೌರವ ಅಷ್ಟರ ಮಟ್ಟಿಗೆ ಇದೆ. ಶ್ರೀಗಳು ದಿನ ಪತ್ರಿಕೆಗಳಿಗೆ ಬರೆಯುವ ಲೇಖನವನ್ನು ನಾನು ತಪ್ಪದೇ ಓದುತ್ತೇನೆ. ಈ ಲೇಖನಗಳಿಂದ ನಮ್ಮಲ್ಲಿ ಏನು ತಪ್ಪಿದೆ ಎಂಬುದನ್ನು ತಿದ್ದಿಕೊಳ್ಳಲು ಸಹಕಾರಿಯಾಗಿದೆ. ಅದೇ ರೀತಿ ಅಧಿಕಾರಿಗಳಿಂದ ಯಾವುದೇ ಕಾರ್ಯ ಆಗದಿದ್ದಲ್ಲಿ, ಅವರನ್ನು ಕರೆದು ಬುದ್ಧಿವಾದ ಹೇಳಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿಸುತ್ತಾರೆ ಎಂದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top