ನವದೆಹಲಿ: ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ನಲ್ಲಿ ಚಾರುಲತಾ ಪಟೇಲ್ ಎಂಬ 87 ವರ್ಷದ ಅಜ್ಜಿ ಟೀಮ್ ಇಂಡಿಯಾಗೆ ಚೀಯರ್ ಹೇಳಿ ಸಖತ್ ಟ್ರೋಲ್ ಆಗಿದ್ರು. ಟೀಮ್ ಇಂಡಿಯಾದ ಸೂಪರ್ ಫ್ಯಾನ್ ಆಗಿದ್ದ ಚಾರುಲತಾ ಪಟೇಲ್ ಇನ್ನಿಲ್ಲ.
How amazing is this?!
India's top-order superstars @imVkohli and @ImRo45 each shared a special moment with one of the India fans at Edgbaston.#CWC19 | #BANvIND pic.twitter.com/3EjpQBdXnX
— ICC Cricket World Cup (@cricketworldcup) July 2, 2019
ಭಾರತ ಮತ್ತು ಬಾಂಗ್ಲಾದೇಶ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಚಾರುಲತಾ ಅವರು ಟೀಮ್ ಇಂಡಿಯಾ ಆಟಗಾರಿಗೆ ಚೀಯರ್ ಹೇಳಿದ್ದರು. ಈ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇಳಿ ವಯಸ್ಸಿನಲ್ಲೂ ಟೀಂ ಇಂಡಿಯಾಗೆ ಅವರು ಪ್ರೋತ್ಸಾಹಿಸಿದ ಪರಿಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದರು.
ಇದು ಕೇವಲ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲ ಟೀ ಇಂಡಿಯಾ ನಾಯಕ ಕಿಂಗ್ ವಿರಾಟ್ ಕೋಹ್ಲಿ, ಪವರ್ ಹಿಟರ್ ರೋಹಿತ್ ಶರ್ಮಾ ಕೂಡ ಚಾರುಲತಾ ಅವರ ಇಳಿ ವಯಸ್ಸಿನಲ್ಲೂ ಪ್ರೀತಿಯ ಪ್ರೋತ್ಸಾಹಕ್ಕೆ ಮನಸೋತ್ತಿದ್ದರು. ಟೀಮ್ ಇಂಡಿಯಾದ ಇಂತಹ ಫ್ಯಾನ್ ಇದೀಗ ವಿಧಿವಶರಾಗಿದ್ದು, ಚಾರುಲತಾ ಅವರ ಮೊಮ್ಮಗಳು ಅವರ ಅಗಲಿಕೆಯ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜ.13ರ ಸಂಜೆ 5:30ರ ಹೊತ್ತಿಗೆ ನಮ್ಮ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಸಣ್ಣ ವಸ್ತುಗಳು ಸಣ್ಣ ಪ್ಯಾಕೆಜ್ಗಳಲ್ಲಿ ಬರುತ್ತದೆ ಎಂಬುದು ಸತ್ಯ. ಅವರು ಅಸಾಧಾರಣ. ಅವರು ನಮ್ಮ ಪ್ರಪಂಚ ಎಂದು ಬರೆದು ಪೋಸ್ಟ್ ಮಾಡಲಾಗಿದೆ.
ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಚಾರುಲತಾ ಅವರು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು. ಪಂದ್ಯದ ಬಳಿಕ ಚಾರುಲತಾ ಅವರನ್ನು ಭೇಟಿ ಮಾಡಿದ್ದ ಕೊಹ್ಲಿ, ಅವರಿಂದ ಆಶೀರ್ವಾದ ಪಡೆದಿದ್ದರು. ಅಲ್ಲದೇ ಅವರ ಫೋಟೋ ಹಂಚಿಕೊಂಡು’ ಇಷ್ಟೊಂದು ಪ್ರೀತಿ ಹಾಗೂ ಬೆಂಬಲ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಅದರಲ್ಲೂ ಚಾರುಲತಾ ಪಟೇಲ್ ಅವರಿಗೆ ತುಂಬು ಹೃದಯದ ಧನ್ಯವಾದ ಹೇಳಿದ್ದರು. 87 ವರ್ಷದ ವಯಸ್ಸಿನಲ್ಲೂ ಇಂತಹ ಅಭಿಮಾನವನ್ನು ತೋರಿರುವುದನ್ನು ನಾನು ನೋಡಿಲ್ಲ. ಅವರಿಂದ ಆಶೀರ್ವಾದ ಪಡೆದಿದ್ದೇನೆ ಟ್ವೀಟ್ ಮಾಡಿದ್ದರು.
Also would like to thank all our fans for all the love & support & especially Charulata Patel ji. She's 87 and probably one of the most passionate & dedicated fans I've ever seen. Age is just a number, passion takes you leaps & bounds. With her blessings, on to the next one. 🙏🏼😇 pic.twitter.com/XHII8zw1F2
— Virat Kohli (@imVkohli) July 2, 2019
ಅಜ್ಜಿಯ ಹಿನ್ನೆಲೆ ಏನು?
ಈ ಅಜ್ಜಿ ಭಾರತದಲ್ಲಿ ಹುಟ್ಟಿಲ್ಲ. ತಾಂಜಾನೀಯಾದಲ್ಲಿ ಜನಿಸಿದರೂ ನನ್ನ ಪೋಷಕರು ಭಾರತದಲ್ಲಿದ್ದರು. ಹೀಗಾಗಿ ನಾನು ನನ್ನ ದೇಶದ ಬಗ್ಗೆ ಹೆಮ್ಮೆ ಪಡುತ್ತೇನೆ. ನಾನು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದ್ದೆ. ಬಳಿಕ 1975ರಿಂದ ತಾಂಜಾನೀಯಾದಲ್ಲಿ ನೆಲೆಸಿದ್ದಾರೆ.
ನಾನು ಟಿವಿಯಲ್ಲೇ ಪಂದ್ಯ ವೀಕ್ಷಿಸುತ್ತಿದ್ದೇನೆ. ಕಳೆದ 20 ವರ್ಷದಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ಈ ವಿಶ್ವಕಪ್ ಪಂದ್ಯವನ್ನು ನೇರವಾಗಿ ನೋಡಲು ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಲಕ್ಕಿ ಎಂದು ಚಾರುಲತಾ ಹೇಳಿದ್ದರು.