ಡಿವಿಜಿ ಸುದ್ದಿ, ಕೋಲ್ಕತ್ತಾ: ಐತಿಹಾಸಿಕ ಹೊನಲು-ಬೆಳಕಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಎದುರು ಬಾಂಗ್ಲಾ ಬ್ಯಾಟ್ಸ್ ಮನ್ ಗಳು ಪರದಾಟ ನಡೆಸಿದ್ರು. ಕೇವಲ 106 ರನ್ ಗಳಿಗೆ ಬಾಂಗ್ಲಾ ತನ್ನೇಲ್ಲ ವಿಕೆಟ್ ಕಳೆದುಕೊಂಡಿದೆ.
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ದಾಳಿ ಎದುರಿಸಲು ವಿಫಲವಾದರು.

ಮಧ್ಯಾಹ್ನ ಭೋಜನ ವಿರಾಮಕ್ಕೂ ಮುನ್ನ ಬಾಂಗ್ಲಾದೇಶವು 6 ವಿಕೆಟ್ ನಷ್ಟಕ್ಕೆ 60 ರನ್‍ಗಳಿಸಿತ್ತು. ಈ ಪೈಕಿ ಮೂವರು ಆಟಗಾರರು ಶೂನ್ಯಕ್ಕೆ ಔಟಾಗಿದ್ದರು. ಶಾದ್ಮನ್ ಇಸ್ಲಾಂ 29 ರನ್, ಲಿಟ್ಟಲ್ ದಾಸ್ 24 ರನ್, ನಯೀಮ್ ಹಸನ್ 19 ರನ್ ಸಹಾಯದಿಂದ ಬಾಂಗ್ಲಾ ತಂಡವು ಟೀ ವಿರಾಮಕ್ಕೂ ಮುನ್ನವೇ 30.3 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 106 ರನ್ ಗಳಿಸಲು ಸಾಧ್ಯವಾಯಿತು.
ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಒಟ್ಟು 12 ಓವರ್ ಮಾಡಿ, 4 ಮೆಡನ್ ಮೂಲಕ 5 ವಿಕೆಟ್ ಕಿತ್ತಿರು. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಐದು ವಿಕೆಟ್ ಕಿತ್ತ ಮೊದಲ ಭಾರತೀಯ ಎಂಬ ಹಿರಿಮೆಗೆ ಇಶಾಂತ್ ಶಾರ್ಮಾ ಪಾತ್ರರಾದ್ರು. ಉಳಿದಂತೆ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 2 ವಿಕೆಟ್ ಉರುಳಿಸಿದ್ರು.



