ಡಿವಿಜಿ ಸುದ್ದಿ, ದಾವಣಗೆರೆ: ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ‘ಪೇರೆಂಟ್ಸ್ ಸ್ಪೋರ್ಟ್ಸ್ ಮೀಟ್’ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪೋಷಕರು ತುಂಬಾ ಉತ್ಸಾಹದಿಂದ ಭಾಗಿಯಾಗಿ, ಪ್ರತಿಯೊಂದು ಆಟವನ್ನು ಸಖತ್ ಎಂಜಾಯ್ ಮಾಡಿದರು.

ಪ್ರತಿ ಸಲ ತಮ್ಮ ಮಕ್ಕಳನ್ನು ಕ್ರೀಡೆಗೆ ಪ್ರೋತ್ಸಹಿಸುವ ಪೋಷಕರಿಗೆ ಇವತ್ತು ಮಕ್ಕಳೇ ಚಪ್ಪಾಳೆ ಮೂಲಕ ಪ್ರೋತ್ಸಹಿಸಿದರು. ಥ್ರೂ ಬಾಲ್, ಓಟದ ಸ್ಪರ್ಧೆ, ಸ್ಥಳದಲ್ಲಿಯೇ ಬೇಯಿಸಿದ ವಿವಿಧ ತಿನುಸುಗಳನ್ನು ತಯಾರಿಸು ಸ್ಪರ್ಧೆ ಸೇರಿದಂತೆ ವಿವಿಧ ಆಟಗಳನ್ನು ಪೋಷಕರಿಗೆ ಆಡಿಸಲಾಯಿತು. ಈ ಮೂಲಕ ತಮ್ಮ ವಿದ್ಯಾರ್ಥಿ ಜೀವನವನ್ನು ಮತ್ತೊಮ್ಮೆ ನೆನಪಿಸಿದಂತಾಗಿತ್ತು ಎಂದು ಪೋಷಕರು ಹರ್ಷ ವ್ಯಕ್ತಪಡಿಸಿದರು.

ದೈಹಿಕ ಶಿಕ್ಷಕ ನಾಗರಾಜ್ ನಾಯ್ಕ್ , ದಿಲೀಪ್ , ಶಿಕ್ಷಕಿ ಇಂದ್ರ ತೀರ್ಪುಗಾರರಾಗಿ ನಡೆಸಿಕೊಟ್ಟರು. ವಿವಿಧ ಖಾದ್ಯ ಸ್ಪರ್ಧೆಯ ತೀರ್ಪುಗಾರರಾಗಿ ಶಿಕ್ಷಕಿ ಶೋಭಾ ನಿರ್ವಹಿಸಿದರು.ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎಂ ಸುರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪ್ರಾಂಶುಪಾಲರಾದ ಪ್ರಭಾವತಿ, ಶಾಲಾ ಆಡಳಿತ ಅಧಿಕಾರಿ ಹರೀಶ್ ಬಾಬು, ಮುಖ್ಯ ಶಿಕ್ಷಕಿ ಗಾಯತ್ರಿ, ಪ್ರಕಾಶ್, ಮಾಲ, ಶಿಕ್ಷಕಿ ಹೇಮಾ, ಶಿವಾನಂದ್ ಮತ್ತಿತರರು ಹಾಜರಿದ್ದರು.



