Connect with us

Dvg Suddi-Kannada News

ದೆಹಲಿ ಚುನಾವಣೆ : ರಾಷ್ಟ್ರಪತಿ ರಾಮ ನಾಥ್ ಕೋವಿಂದ್ , ಸೋನಿಯಾ, ಕೇಜ್ರಿವಾಲ್, ರಾಹುಲ್ ಸೇರಿದಂತೆ ಪ್ರಮುಖರ ಮತದಾನ

ಪ್ರಮುಖ ಸುದ್ದಿ

ದೆಹಲಿ ಚುನಾವಣೆ : ರಾಷ್ಟ್ರಪತಿ ರಾಮ ನಾಥ್ ಕೋವಿಂದ್ , ಸೋನಿಯಾ, ಕೇಜ್ರಿವಾಲ್, ರಾಹುಲ್ ಸೇರಿದಂತೆ ಪ್ರಮುಖರ ಮತದಾನ

ನವದೆಹಲಿ: ದೆಹಲಿ ವಿಧಾನಸಭೆಯ ಒಟ್ಟು 70 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು,  ಬೆಳಗ್ಗೆಯಿಂದಲೇ  ಮತದಾನ ಆರಂಭವಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ , ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರು ಮತದಾನ ಮಾಡಿದರು.

ದೆಹಲಿಯಲ್ಲಿ ಒಟ್ಟು 1,47,86,382 ಮತದಾರರಿದ್ದು, 2,689 ಕೇಂದ್ರಗಳ 13,750 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ 516 ಕೇಂದ್ರ ಹಾಗೂ 3,704 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದು, ಆಡಳಿತ ಪಕ್ಷ ಎಎಪಿ ಮತ್ತು ಬಿಜೆಪಿ, ಕಾಂಗ್ರೆಸ್‌ ನಡುವೆ ಪೈಪೋಟಿ ಇದೆ.

ಭದ್ರತೆಗಾಗಿ 40,000 ರಕ್ಷಣಾ ಸಿಬ್ಬಂದಿ, 19,000 ಗೃಹ ರಕ್ಷಣಾ ದಳ ಸಿಬ್ಬಂದಿ, ಕೇಂದ್ರ ಸಶಸ್ತ್ರ ಮೀಸಲು ಪಡೆಯ 190 ಪಡೆಗಳನ್ನು ನಿಯೋಜಿಸಲಾಗಿದೆ. ಕಳೆದ ಚುನಾವಣೆಯಲ್ಲಿ 67 ಕ್ಷೇತ್ರಗಳನ್ನು ಗೆದಿದ್ದ  ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಈ ಬಾರಿಯೂ ಅಧಿಕಾರಕ್ಕೇರುವ ವಿಶ್ವಾಸ ವ್ಯ್ಕತಪಡಿಸಿದ್ದು, ಫೆ. 11 ರಂದು ಫಲಿತಾಂಶ ಹೊರ ಬೀಳಲಿದೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪತ್ನಿ ಸವಿತಾ ಕೋವಿಂದ್ ಜೊತೆ ಆಗಮಿಸಿ ಡಾ. ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದಲ್ಲಿ ಮತದಾನ ಮಾಡಿದರು.

ಮಾಜಿ ಪ್ರಾಧನಿ ಡಾ. ಮನಮೋಹನ್ ಸಿಂಗ್ ಪತ್ನಿ ಜೊತೆ ಆಗಮಿಸಿ ನಿರ್ಮಾಣ್ ಭವನಲ್ಲಿ ಮತದಾನ  ಮಾಡಿದರು. ಸಂಸದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಜೊತೆ ಆಗಮಿಸಿ ಮತದಾನ ಮಾಡಿದರು.

ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಫ್ಯಾಮಿಲಿ ಸಮೇತರಾಗಿ ಬಂದು ಮತದಾನ ಮಾಡಿದರು. ದೆಹಲಿ ಜನರು ನಮ್ಮ ಕೆಲಸವನ್ನು ಒಪ್ಪಿ, ನಮಗೆ  ಮತ ನೀಡುತ್ತಾರೆ ಎನ್ನುವ ವಿಶ್ವಾಸವಿದದೆ. ಮತ್ತೊಮ್ಮೆ ಆಪ್ ಸರ್ಕಾರ ಬರುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಕೇಜ್ರೀವಾಲ್ ವಿಶ್ವಾಸ ವ್ಯಕ್ತಪಡಿಸಿದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top