ಡಿವಿಜಿ ಸುದ್ದಿ, ದಾವಣಗೆರೆ: ಇಡೀ ವಿಶ್ವವೇ ಕೊರೊನಾ ವೈರಸ್ ನಿಂದ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಮಹಾಮಾರಿ ಕೊರೊನಾ ವೈರಸ್ ನಿಂದ ಸಂಕಷ್ಟ ನಿವಾರಣೆಗೆ ಅಖಿಲ ವೀರಶೈವ ಮಹಾ ಸಭಾ ಇಷ್ಟಲಿಂಗ ಪೂಜೆಗೆ ಕರೆ ನೀಡಿತ್ತು.
ಮಹಾ ಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು, ಇಂದು ತಮ್ಮ ಮನೆಯಲ್ಲಿ ಇಷ್ಟ ಲಿಂಗ ಪೂಜೆ ನೆರವೇರಿಸಿದರು. ಮಹಾ ಸಭಾದ ವತಿಯಿಂದ ಎಲ್ಲಾ ಪಂಚ ಪೀಠಗಳು, ವಿರಕ್ತ ಮಠಗಳು ಸೇರಿದಂತೆ ಎಲ್ಲರು ಸೋಮವಾರ ಸಂಜೆ 7 ಗಂಟೆಗೆ ಇಷ್ಟಲಿಂಗ ಪೂಜೆ ಮಾಡುವಂತೆ ಕರೆ ನೀಡಲಾಗಿತ್ತು.