Connect with us

Dvg Suddi-Kannada News

ಪೊಲೀಸ್ ಮಹಾ ನಿರ್ದೇಶಕರಾಗಿ ಪ್ರವೀಣ್ ಸೂದ್ ಆಯ್ಕೆ

ಮುಖಪುಟ

ಪೊಲೀಸ್ ಮಹಾ ನಿರ್ದೇಶಕರಾಗಿ ಪ್ರವೀಣ್ ಸೂದ್ ಆಯ್ಕೆ

ಡಿವಿಜಿ ಸುದ್ದಿ, ಬೆಂಗಳೂರು: ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಿ  ಸರ್ಕಾರ ಆದೇಶ ಹೊರಡಿಸಿದೆ.

ನೀಲಮಣಿ ಎನ್. ರಾಜು ಅವರು  ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ಪ್ರವೀಣ್ ಸೂದ್ ಆಯ್ಕೆ ಆಗಿದ್ದಾರೆ. ಸೇವಾ ಹಿರಿತನ ಹೊಂದಿರುವ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎಎಂ ಪ್ರಸಾದ್, ಸಿಐಡಿ, ಡಿಜಿಪಿ ಪ್ರವೀಣ್ ಸೂದ್, ನೇಮಕಾತಿ ವಿಭಾಗದ ಡಿಜಿಪಿ ಪಿ.ಕೆ ಗರ್ಗ್ ಹೆಸರು ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಕೇಳಿಬಂದಿತ್ತು.

ಸೇವಾ ಹಿರಿತನ ಹೊಂದಿರುವ ಈ ಮೂವರು ಹಿರಿಯ ಅಧಿಕಾರಿಗಳ ಹೆಸರುಗಳನ್ನು ರಾಜ್ಯ ಸರ್ಕಾರ ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳಿಸಿಕೊಟ್ಟಿತ್ತು. ಈಗ ಕೇಂದ್ರ ಲೋಕಸೇವಾ ಆಯೋಗವು ಲಕೋಟೆ ಮೂಲಕ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಬೇಕಾದ ಹೆಸರುಗಳನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿದೆ.ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಕೇಂದ್ರ ಲೋಕಸೇವಾ ಆಯೋಗಕ್ಕೆ ಡಿಜಿ-ಐಜಿಪಿ ಹುದ್ದೆಗೆ ಆಯ್ಕೆ ಮಾಡಬೇಕಾದ ಸಂಭಾವ್ಯರ ಹೆಸರುಗಳನ್ನು ಆಯ್ಕೆ ಮಾಡಿತ್ತು.

1985 ಕೇಡರಿನ ಅಧಿಕಾರಿ ಎ.ಎಂ ಪ್ರಸಾದ್ ಅವರಿಗೆ  9 ತಿಂಗಳ ಸೇವಾವಧಿ ಹೊಂದಿದ್ದು,  1986ನೇ ಕೇಡರಿನ ಅಧಿಕಾರಿಗಳಾದ ಪ್ರವೀಣ್ ಸೂದ್ ಅವರಿಗೆ ಇನ್ನೂ 2 ವರ್ಷ ಸೇವಾವಧಿ ಇದೆ.  ಪಿ ಕೆ ಗರ್ಗ್ ಅವರಿಗೆ 1.5 ವರ್ಷ ಸೇವಾವಧಿ ಹೊಂದಿದ್ದಾರೆ. ಅಂತಿಮವಾಗಿ  ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ಆಯ್ಕೆಯಾಗಿದ್ದಾರೆ.

 

 

 

Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top