ಡಿವಿಜಿ ಸುದ್ದಿ, ದಾವಣಗೆರೆ : ಬಿಟಿ ಫೀಡರ್ ಮತ್ತು ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಶಿವಾಲಿ ಫೀಡರ್‍ನ ವ್ಯಾಪ್ತಿಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಕಾಮಗಾರಿ ಕೆಲಸವಿರುವುದರಿಂದ ಡಿ.14 ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬಿ.ಟಿ ಫೀಡರ್ ವ್ಯಾಪ್ತಿಯ ರೆಹಮಾನ್ ರಸ್ತೆ, ಮಾಗನಹಳ್ಳಿ ರೋಡ್ ಮಂಡಕ್ಕಿ ಭಟ್ಟಿ 1ನೇ ಕ್ರಾಸ್‍ನಿಂದ 10ನೇ ಕ್ರಾಸ್‍ವರೆಗೆ, ಕಾರ್ಲಮಾರ್ಕ್ಸ್ ನಗರ, ದೇವರಾಜ್ ಕ್ವಾರ್ಟಸ್(ಬೇತೂರ್ ರಸ್ತೆ) ದೇವೆಂದ್ರಪ್ಪ ರಸ್ತೆ, ಶಿವ ಪಾರ್ವತಿ ನಗರ, ಮೀನ ಮಾರ್ಕೆಟ್ ಎದುರು ರೋಡ್ , ಪೆಟ್ರೋಲ್ ಬಂಕ್ , ಕೋಳಿ ಚೆನ್ನಪ್ಪ ಮಿಲ್ ಹತ್ತಿರ ಸುತ್ತಮುತ್ತ ಇತರೆ ಪ್ರದೇಶಗಳು ಹಾಗೂ ಶಿವಾಲಿ ಫೀಡರ್ ವ್ಯಾಪ್ತಿಯ ಬಾಷಾನಗರ ಮೇನ್ ರೋಡ್, ಬೀಡಿ ಲೇಔಟ್, ರಝಾವುಲ್ಲ ಮುಸ್ತಫಾ ನಗರ, ಶಿವನಗರ ಮೇನ್ ರೋಡ್, ಎಸ್.ಎಸ್.ಎಮ್ ನಗರ ಎ, ಬಿ, ಮತ್ತು ಸಿ ಬ್ಲಾಕ್ ಹತ್ತಿರದ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.