ಡಿವಿಜಿ ಸುದ್ದಿ, ಮೈಸೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಅನುಕಂಪ ಗಿಟ್ಟಿಸಲು ಕೊಲೆ ಬೆದರಿಕೆಯ ನಾಟಕವಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದರು.
ಮೈಸೂರಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಅಧಿಕಾರದಲ್ಲಿ ಬರಬೇಕು ಎಂದು ಕುಮಾರಸ್ವಾಮಿ ಕಣ್ಣೀರು ಹಾಕದು, ಕೊಲೆ ಬೆದರಿಕೆ ಬಂದಿದೆ ಎಂದು ಹೇಳಿ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಕುಮಾರಸ್ವಾಮಿ ಅವರಿಗೆ ಕೊಲೆ ಬೆದರಿಕೆ ಬಂದಿದ್ದರೆ, ಯಾರು ಬೆದರಿಕೆ ಹಾಕಿದ್ದಾರೆ ಅನ್ನೋ ದಾಖಲೆ ಬಹಿರಂಗಪಡಿಸಲಿ. ಜನರಿಗೆ ವಾಸ್ತಾಂಶ ತಿಳಿಸಬೇಕು. ಬೆದರಿಕೆಗೆ ಸೂಕ್ತ ದಾಖಲೆ ನೀಡಿದರೆ, ಕಾನೂನು ರೀತಿ ಕ್ರಮಮ ಕೈಗೊಳ್ಳುವ ವ್ಯವಸ್ಥೆ ಇದೆ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ಕೊಲೆ ಬಂದಿದೆ ಎಂದು ಹೇಳಿಕೊಳ್ಳವುದಲ್ಲ ಎಂದರು.



