ಡಿವಿಜಿ ಸುದ್ದಿ, ರಾಮನಗರ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿನ ಕೆಲವು ನಾಯಕರಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕೆಂಬ ಆಸೆಯಿದೆ. ಸಿದ್ದರಾಮಯ್ಯನವರೇ ನಾವು ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ. ಹೀಗಾಗಿ ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿರುಬಹುದು ಎಂದು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಕೆಲವು ನಾಯಕರಿಗೆ ಬಿಜೆಪಿ ಸರ್ಕಾರ ಬರಲು ಪರೋಕ್ಷ ಬೆಂಬಲ ನೀಡಿದ್ದರೋ ಅವರಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕೆಂಬ ಆಸೆಯಿದೆ. ಎಂಎಲ್‍ಸಿ ಚುನಾವಣಾ ಸಂಬಂಧ ನಾನು ಯಾವುದೇ ಗಮನ ಕೊಟ್ಟಿಲ್ಲ. ವಿಧಾನಪರಿಷತ್ ಚುನಾವಣೆಯಲ್ಲಿ ಸಮಾನ ಮನಸ್ಕರ ಮತ ಪಡೆಯಲು ಪ್ರಯತ್ನಿಸುತ್ತೇನೆ ಅವಕಾಶ ಕೊಡಿ ಎಂದು ಪಕ್ಷೇತರ ಅಭ್ಯರ್ಥಿ ರೇವಣ್ಣ ಅವರನ್ನು ಕೇಳಿಕೊಂಡಿದ್ದಾರೆ. ಅದಕ್ಕಾಗಿ ರೇವಣ್ಣನವರು ಅರ್ಜಿ ಹಾಕಲು 10 ಶಾಸಕರ ಸಹಿ ಹಾಕಿಸಿಕೊಟ್ಟಿದ್ದರು. ನನ್ನನ್ನ ಕೇಳಿ ಅವರು ನಾಮಪತ್ರ ಹಾಕಿಲ್ಲ ಎಂದು ತಿಳಿಸಿದರು.
ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎ.ಪಿ ರಂಗನಾಥ್ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಬೇರೆಯವರ ರೀತಿ ಅಮಿತ್ ಶಾ, ಮೋದಿ ಫೋಟೋ ಹಾಕಿಕೊಂಡು ಟಿಫನ್ ಬಾಕ್ಸ್ ಕೊಡ್ತಿದ್ದಾರಲ್ಲ ಆ ರೀತಿಯ ಕೆಲಸ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಪುಟ್ಟಣ್ಣಗೆ ಟಾಂಗ್ ನೀಡಿದ್ದಾರೆ.
.



