Connect with us

Dvg Suddi-Kannada News

ಹಿರೇ ಕೋಗಲೂರು ‌ಗ್ರಾಮದಲ್ಲಿ ಮೆಕ್ಕೆಜೋಳ ರಾಶಿ ಸಂಪೂರ್ಣ ಭಸ್ಮ

ಪ್ರಮುಖ ಸುದ್ದಿ

ಹಿರೇ ಕೋಗಲೂರು ‌ಗ್ರಾಮದಲ್ಲಿ ಮೆಕ್ಕೆಜೋಳ ರಾಶಿ ಸಂಪೂರ್ಣ ಭಸ್ಮ

ಡಿವಿಜಿ ಸುದ್ದಿ, ಚನ್ನಗಿರಿ: ತಾಲೂಕಿನ‌ ಹಿರೇ ಕೋಗಲೂರು ‌ಗ್ರಾಮದಲ್ಲಿ ಮೆಕ್ಕೆಜೋಳದ ರಾಶಿಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ರುದ್ರಮ್ಮ, ಕೋಟ್ಯಪ್ಪ ಎಂಬುವರ ಸರ್ಕಾರಿ ಗೋಮಾಳ ಜಮೀನಿನಲ್ಲಿ‌  ಮಧ್ಯಾಹ್ನ ಯಾರೋ ದುಶ್ಕರ್ಮಿಗಳು‌ ಬೆಂಕಿ ಹಚ್ಚಿದ್ದಾರೆ.  ಇದರಿಂದ  ಸುಮಾರು‌ 1 ಲಕ್ಷದ 55 ಸಾವಿರ ಬೆಲೆಬಾಳುವ ಮೆಕ್ಕೆಜೋಳ ಸುಟ್ಟು ಹೋಗಿದೆ. ವಿಷಯ ತಿಳಿದ ಗ್ರಾಮಸ್ಥರು ಅಗ್ನಿ ಶಾಮಕದಳಕ್ಕೆ  ತಿಳಿಸಿದ್ದಾರೆ. ಕೂಡಲೇ ಬಂದ ಅಗ್ನಿಶಾಮಕದಳ ಬೆಂಕಿಯನ್ನು ನಂದಿಸಿದ್ದಾರೆ .

ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿಯಾದ ಕೆ.ಹೆಚ್. ತಿಲಕ್ ಕುಮಾರ್ ಆಗಮಿಸಿ ಮಹಜರ್ ನಡೆಸಿದರು. ಸಂತ್ರಸ್ತರಿಗೆ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವು ಕೊಡಿಸುವುದಾಗಿ ಭರವಸೆ ನೀಡಿದರು. ಬಿ.ಜಿ ಸ್ವಾಮಿ , ಕೆಪಿ ವೆಂಕಟೇಶ್ , ರವೀಂದ್ರಕುಮಾರ್ , ಶಂಕ್ರಪ್ಪ ಹಾದಿಮನೆ ಸೇರಿದಂತೆ ಇನ್ನಿತರ ಗ್ರಾಮಸ್ಥರು ಬೆಂಕಿಯನ್ನು ನಂದಿಸುವಲ್ಲಿ‌ ಸಹಾಯಕರಾದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top