ಡಿವಿಜಿ ಸುದ್ದಿ, ದಾವಣಗೆರೆ: ಕಾಲಭೈರವನ ಆರಾಧಕರಾದ ಡಿ.ಕೆ.ಶಿವಕುಮಾರ್ ಅವರಿಗೆ ತಂದೆ-ತಾಯಿ, ಶಿವಕುಮಾರ್ ಅಂತಾ ಹೆಸರಿಟ್ಟರೆ ನೀವು ಏಸು ಕುಮಾರನಾಗಲು ಆಗ್ತೀನಿ ಅಂತೀರಲ್ಲ ..? ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆಶಿ ಕಾಲಭೈರವನ ಬೆಟ್ಟದಲ್ಲಿ ಅದರಲ್ಲೂ ಸರ್ಕಾರಿ ಗೋಮಾಳದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಲು ಹೊರಟಿದ್ದಾರೆ. ಡಿಕೆಶಿ ತಂದೆ ತಾಯಿ ಶಿವನ ಆರಾಧನೆ ಮಾಡುತ್ತಾರೆ. ಅವರು ಇಂತಹ ಸುಪುತ್ರನನ್ನು ಪಡೆಯಲು ಪುಣ್ಯ ಮಾಡಿರಬೇಕು ಎಂದು ಟೀಕಿಸಿದರು.
ಇನ್ಮುಂದೆ ಶಿವಕುಮಾರ್ ಹೆಸರು ಕರೆಯುವುದಕ್ಕಿಂತ. ಏಸು ಕುಮಾರ ಅಂತಾ ನಾವೇ ನಾಮಕರಣ ಮಾಡಿ ಬಿಡೋಣ.. ಡಿಕೆಶಿ ಇಡೀ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ. ಪವಿತ್ರವಾದ ಕಾಲಭೈರವನ ಬೆಟ್ಟದಲ್ಲಿ ಏಸುವಿನ ವಿಗ್ರಹ ಮಾಡಲು ಹೊರಟಿದ್ದೀರಲ್ಲ. ಅದರಲ್ಲೂ ಸರ್ಕಾರಿ ಜಾಗದಲ್ಲಿ ನಿಮ್ನನ್ನು ಏನು ಎಂದು ಕರೆಯಬೇಕು ಎಂದು ಕಿಡಿಕಾರಿದರು.
ಆಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಕಟ್ಟಲು ವಿರೋಧ ಮಾಡಿದರು. ವಲ್ಲಬಾಯಿ ಪಟೇಲ್ ಪ್ರತಿಮೆ ನಿರ್ಮಾಣ ಮಾಡಿದಾಗ ವಿರೋಧ ಮಾಡಿದವರಿಗೆ ಕಾಲಭೈರವನ ಬೆಟ್ಟದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಲು ಬಿಡೋದಿಲ್ಲ ಎಂದರು.