ಡಿವಿಜಿ ಸುದ್ದಿ, ಅಥಣಿ: ರಾಜ್ಯದಲ್ಲಿ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 12 ಸ್ಥಾನ ಗೆದ್ದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಒಂದು ತೊಲ ಬಂಗಾರದ ಉಂಗುರ ತೊಡಿಸಿ, ರೇಷ್ಮೆ ಪೇಟ ಹಾಕಿ ಇಡೀ ಅಥಣಿ ಬಜಾರ್ ದಲ್ಲಿ ಮೆರವಣಿಗೆ ಮಾಡಿಸ್ತೀನಿ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆಫರ್ ನೀಡಿದರು.
ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಪರ ಪ್ರಚಾರಕ್ಕೆ ಬಂದಿದ್ದ ಗೋವಿಂದ ಕಾರಜೋಳ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಜನತಾದಳದಲ್ಲಿದ್ದಾಗ ಇಷ್ಟೊಂದು ಸುಳ್ಳು ಹೇಳುತ್ತಿರಲಿಲ್ಲ. ಕಾಂಗ್ರೆಸ್ ಸೇರ್ಪಡೆ ಬಳಿಕ ಬಹಳ ಸುಳ್ಳು ಹೇಳದನ್ನು ಕಲಿತಿದ್ದಾರೆಂದು ವ್ಯಾಂಗ್ಯವಾಡಿದ್ರು



