ಡಿವಿಜಿ ಸುದ್ದಿ, ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬಂಟಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಫೂನ್ ಎಂದು ಕರೆದಿರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಒಬ್ಬ ಕಾಮೀಡಿ ಪೀಸ್ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ದಶಕಗಳಿಂದ ರಾಜಕಾರಣದಲ್ಲಿ ಇದ್ದರೂ, ರಾಜಕೀಯ ಗಂಭೀರತ, ಸಭ್ಯತೆ ಕಲಿಯದಿರುವುದು ದುರಂತ. ಅವರು ರಾಜ್ಯ ರಾಜಕಾರಣದಲ್ಲಿ ಕಾಮೀಡಿ ಪೀಸ್ ರೀತಿ ಆಗಿದ್ದಾರೆ. ಅವರ ಮಾತಿಗೆ ಯಾರು ಬೆಲೆ ಕೊಡುವುದಿಲ್ಲ. ಅವರೊಬ್ಬ ಬ್ಲ್ಯಾಕ್ ಮೇಲ್ ರಾಜಕಾರಣಿ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ದೇವರಾಜ ಅರಸು ನಂತರ ಬಡವರ ಪರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದ ನಾಯಕ. ಅವರು ಒಂಟಿಯಲ್ಲ. ಅವರಿಗೆ ಕೋಟ್ಯಾಂತರ ಜನರ ಬೆಂಬಲವಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಬ್ಬ ಸಮರ್ಥ ನಾಯಕ. ರೇಣುಕಾಚಾರ್ಯ ಅವರು ಇಂತಹ ಕೀಳು ಮಟ್ಟದ ಮಾತುಗಳ ಮೂಲಕ ರಾಜಕಾರಣ ಮಾಡುತ್ತಿರುವುದು ಅವರಿಗೆ ಶೋಭೆ ತರುವಂತಹದಲ್ಲ ಎಂದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ನಂಜಾನಾಯ್ಕ್ ಉಪಸ್ಥಿತರಿದ್ದರು



