ಡಿವಿಜಿ ಸುದ್ದಿ, ಬೆಂಗಳೂರು: ಮಾಸ್ ಲೀಡರ್ ಶ್ರೀರಾಮುಲು, ಗೋಕಾಕ್ ಸಾಹುಕಾರ ರಮೇಶ ಜಾರಕಿಹೊಳಿ ಅವರು ನಮ್ಮ ಪಕ್ಷದ ಪ್ರಮುಖ ನಾಯಕರು.ಆದರೆ, ಇಲ್ಲಿ ವ್ಯಕ್ತಿಗತ ರಾಜಕಾರಣಕ್ಕಿಂತ ವಿಶ್ವಾಸದ ರಾಜಕಾಣ ಅಗತ್ಯ ಎಂದು ಸಚಿವ ಸಿ.ಟಿ. ರವಿ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯವಲ್ಲ. ಎಲ್ಲರು ಸಾಮಾನ್ಯ ಕಾರ್ಯಕರ್ತರೇ. ಇಲ್ಲಿ ಪಕ್ಷವೇ ಸುಪ್ರೀಂ. ಅಶ್ವತ್ಥನಾರಾಯಣ, ಲಕ್ಷ್ಮಣ್ ಸದವದಿ ಉಪಮುಖ್ಯಮಂತ್ರಿ ಆಗ್ತಾರೆ ಅಂತಾ ಯಾರಿಗೂ ನಿರೀಕ್ಷೆ ಇರಲಿಲ್ಲ. ಆದರೆ, ಪಕ್ಷ ನಿರ್ಧಾರವನ್ನು ಎಲ್ಲರು ಒಪ್ಪಬೇಕಾಗುತ್ತದೆ ಎಂದರು.
ನನಗೆ ಬಿಜೆಪಿ ರಾಜಾಧ್ಯಕ್ಷ ಸ್ಥಾನ ಕೊಟ್ಟಿಲ್ಲ ಎಂದು ಯಾವುದೇ ಬೇಸರವಿಲ್ಲ. ನಮ್ಮ ಪಾಲಿಗೆ ಬಂದಿದ್ದನ್ನು ಸರಿಯಾಗಿ ನಿರ್ವಹಿಸುವುದಷ್ಟೇ ನಮ್ಮ ಕೆಲಸ ಎಂದರು.