Connect with us

Dvg Suddi-Kannada News

ವಿದೇಶಿಯರು ಬಿಟ್ಟು ಹೋದ 1.5 ಲಕ್ಷ ವಾಪಸ್ಸು ಕೊಟ್ಟು ಪ್ರಾಮಾಣಿಕತೆ ಪ್ರದರ್ಶಿಸಿದ  ಆಟೋ ಚಾಲಕ

ರಾಜ್ಯ ಸುದ್ದಿ

ವಿದೇಶಿಯರು ಬಿಟ್ಟು ಹೋದ 1.5 ಲಕ್ಷ ವಾಪಸ್ಸು ಕೊಟ್ಟು ಪ್ರಾಮಾಣಿಕತೆ ಪ್ರದರ್ಶಿಸಿದ  ಆಟೋ ಚಾಲಕ

ಡಿವಿಜಿ ಸುದ್ದಿ, ಬೆಂಗಳೂರು: ಹಣ ಸಿಕ್ಕರೆ ಸಾಕು ನನಗೂ ಬೇಕು, ನಮ್ಮ ಮನೆಯವರಿಗೂ ಬೇಕು ಎನ್ನುವ ಈ ಕಾಲದಲ್ಲಿ, ಆಟೋದಲ್ಲಿ ಬಿಟ್ಟು ಹೋಗಿದ್ದ 1.5 ಲಕ್ಷ ಹಣವನ್ನು ಪ್ರಯಾಣಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ ಬೆಂಗಳೂರಿನ ಆಟೋ ಚಾಲಕ.

ಹೌದು, ಮಾಲ್ಡೀವ್ಸ್ ದೇಶದ ಪ್ರಜೆಯೊಬ್ಬರು ಆಟೊದಲ್ಲಿ 1.5 ಲಕ್ಷ ಹಣವನ್ನು ಬಿಟ್ಟು ಹೋಗಿದ್ದರು.  ಚಾಲಕ ರಮೇಶ್‌ಬಾಬು ನಾಯಕ್ ಪೊಲೀಸರ ಮೂಲಕ ವಿದೇಶಿ ಪ್ರಜೆ ಪತ್ತೆ ಮಾಡಿ ಅವರ ಹಣವನ್ನು ಅವರಿಗೆ ಮರಳಿಸಿದ್ದಾನೆ. ಹೃದಯ ಶಸ್ತ್ರಚಿಕಿತ್ಸೆಗೆಂದು ನಗರಕ್ಕೆ ಬಂದಿದ್ದ ವಿದೇಶಿ ಪ್ರಜೆ, ಶೇಷಾದ್ರಿಪುರದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಚಾಲಕನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್  ಟ್ವೀಟ್‌ ಮಾಡಿ ಧನ್ಯವಾದ ಹೇಳಿದ್ದಾರೆ.

ನಾರಾಯಣ ಹೃದಯಾಲಯದಿಂದ ತಪಾಸಣೆ ಮುಗಿಸಿಕೊಂಡು ರಮೇಶ್‌ಬಾಬು ಅವರ ಆಟೋದಲ್ಲಿ ಶೇಷಾದ್ರಿಪುರ ಲಾಡ್ಜ್‌ ಬಳಿ ಬಂದಿದ್ದರು. ಹಣವಿದ್ದ ಬ್ಯಾಗ್‌ ಆಟೊದಲ್ಲಿ ಬಿಟ್ಟು ಇಳಿದು ಹೋಗಿದ್ದರು. ಸ್ಥಳದಿಂದ ಹೊರಟು ಹೋಗಿದ್ದ ರಮೇಶ್‌ಬಾಬು ಅವರಿಗೆ ಕೆಲ ಗಂಟೆಗಳ ಬಳಿಕ ಆಟೋದಲ್ಲಿದ್ದ  ಹಣದ  ಬ್ಯಾಗ್ ಕಂಡಿದೆ.  ಅದನ್ನು ತೆಗೆದುಕೊಂಡು ಶೇಷಾದ್ರಿಪುರ ಠಾಣೆಗೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ವಿದೇಶಿ ಪ್ರಜೆ ಠಾಣೆಗೆ ದೂರು ನೀಡಲು ಬಂದಿದ್ದರು.

ಆಗ  ರಮೇಶ್‌ಬಾಬು ಅವರಿಂದ ಹಣ ಪಡೆದುಕೊಂಡು ವಿದೇಶಿ ಪ್ರಜೆಗೆ ಹಸ್ತಾಂತರಿಸಲಾಗಿದೆ. ಪ್ರಾಮಾಣಿಕತೆ ಮೆರೆದ ರಮೇಶ್‌ಬಾಬು ಅವರನ್ನು ಸನ್ಮಾನಿಸಿದ್ರು. ಹೃದಯ  ಶಸ್ತ್ರಚಿಕಿತ್ಸೆ ಮಾಡಿಸಲು ಬೆಂಗಳೂರಿಗೆ ಬಂದಿದ್ದೆ. ಹಣ  ಕಳೆದಾಗ ಜೀವವೇ ಹೊಂದಂತಾಗಿತ್ತು. ಹಣ ವಾಪಸ್‌ ನೀಡಿದ್ದಕ್ಕೆ ರಮೇಶ್‌ಬಾಬು ಅವರಿಗೆ ಕೃತಜ್ಞತೆ ಎಂದು ಹಣ ಕಳೆದುಕೊಂಡ ವಿದೇಶಿ ಪ್ರಜೆ ಭಾಸ್ಕರ್.

 

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top