ಡಿವಿಜಿ ಸುದ್ದು, ಶಿರಸಿ: ಯಲ್ಲಾಪುರ ವಿಧಾನ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಭಾರೀ ಮುನ್ನಡೆ ಸಾಧಿಸಿದ್ದು, ಗೆಲುವು ಘೋಷಣೆಯಷ್ಟೇ ಬಾಕಿ ಉಳಿದಿದೆ.
ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ನನ್ನನ್ನು ಅನರ್ಹ ಮಾಡಿದ್ದ ಮಾಜಿ ಸ್ಪೀಕರ್ ರಮೇಶ ಕುಮಾರ್ ಅವರೇ ಇಂದು ಅನರ್ಹರಾಗಿದ್ದಾರೆ . ಮತದಾರರು ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಅಭಿವೃದ್ಧಿಶೀಲ ರಾಜಕಾರಣ ಮಣೆ ಹಾಕಿದ್ದಾರೆ ಎಂದರು.
ಕ್ಷೇತ್ರದ ಮತದಾರರ ಪ್ರೀತಿ, ಗೌರವ ಉಳಿಸಿಕೊಳ್ಳುವೆ. ಪ್ರತಿಸ್ಪರ್ಧಿ ಭೀಮಣ್ಣ ನಾಯ್ಕ ಒಳ್ಳೆಯ ವ್ಯಕ್ತಿ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.



