ಡಿವಿಜಿ ಸುದ್ದಿ, ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಉಪ ಚುನಾವಣೆ ಮುಗಿದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗೆಲ್ಲುವ ಮೂಲಕ ಸರ್ಕಾರ ಸೇಫ್ ಆಗಲಿದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ.
ಸಿ-ವೋಟರ್ ಸಮೀಕ್ಷೆ ಪ್ರಕಾರ ಒಟ್ಟು 15 ಕ್ಷೇತ್ರಗಳ ಪೈಕಿ ಬಿಜೆಪಿಗೆ 9-12 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3 ರಿಂದ 6 ಕ್ಷೇತ್ರದಲ್ಲಿ ಹಾಗೂ ಜೆಡಿಎಸ್‌ಗೆ 1 ಕಡೆ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಯಾರಿಗೆ ಗೆಲುವು-ಮುನ್ನಡೆ
ಹಿರೇಕೆರೂರು: ಬಿಸಿ ಪಾಟೀಲ್‌ಗೆ ಸ್ಪಷ್ಟ ಮುನ್ನಡೆ (ಬಿಜೆಪಿ)
ಯಶವಂತಪುರ: ಎಸ್‌ಟಿ ಸೋಮಶೇಖರ್‌ಗೆ ಗೆಲುವು (ಬಿಜೆಪಿ)
ಯಲ್ಲಾಪುರ: ಶಿವರಾಮ್ ಹೆಬ್ಬಾರ್ ಗೆಲುವು (ಬಿಜೆಪಿ)
ಮಹಾಲಕ್ಷ್ಮಿ ಲೇಔಟ್: ಗೋಪಾಲಯ್ಯ ಗೆಲುವು (ಬಿಜೆಪಿ)
ಕೆಆರ್ ಪುರಂ: ಬೈರತಿ ಬಸವರಾಜ್ ಗೆಲುವು ( ಬಿಜೆಪಿ)
ಗೋಕಾಕ್ : ರಮೇಶ್ ಜಾರಕಿಹೊಳಿ ಗೆಲುವು (ಬಿಜೆಪಿ)
ಅಥಣಿ : ಮಹೇಶ್ ಕುಮಟಳ್ಳಿ ಗೆಲುವು (ಬಿಜೆಪಿ)
ವಿಜಯನಗರ : ಆನಂದ್ ಸಿಂಗ್‌ಗೆ ಗೆಲುವು (ಬಿಜೆಪಿ)
ಕಾಗವಾಡ : ರಾಜು ಕಾಗೆ ಗೆಲುವು (ಕಾಂಗ್ರೆಸ್)
ಹೊಸಕೋಟೆ : ಎಂಟಿಬಿ ನಾಗರಾಜ್ ಗೆಲುವು (ಬಿಜೆಪಿ)
ಕೆಆರ್. ಪೇಟೆ : ಬಿಜೆಪಿ ನಾರಾಯಣ ಗೌಡ ಹಾಗೂ ಜೆಡಿಎಸ್‌ನ ಬಿಎಲ್ ದೇವರಾಜ್ 50:50
ಚಿಕ್ಕಬಳ್ಳಾಪುರ: ಬಿಜೆಪಿಯ ಡಾ. ಕೆ ಸುಧಾಕರ್ ಮತ್ತು ಕಾಂಗ್ರೆಸ್‌ನ ಎಂ ಆಂಜಿನಪ್ಪ 50:50
ಶಿವಾಜಿನಗರ : ಕಾಂಗ್ರೆಸ್ ರಿಜ್ವಾನ್ ಅರ್ಷದ್ ಮತ್ತು ಬಿಜೆಪಿಯ ಎಂ ಸರವಣ 50:50
ರಾಣೆಬೆನ್ನೂರು: ಕಾಂಗ್ರೆಸ್‌ನ ಕೆಬಿ ಕೋಳಿವಾಡ, ಬಿಜೆಪಿಯ ಅರುಣ್ ಕುಮಾರ್ 50:50
ಹುಣಸೂರು: ಎಚ್‌ಪಿ ಮಂಜುನಾಥ್ ಮುನ್ನಡೆ (ಕಾಂಗ್ರೆಸ್)



