ಡಿವಿಜಿ ಸುದ್ದಿ, ಮಂಗಳೂರು: ನಗರದಲ್ಲಿ ಈ ಬಾರಿಯ ನ್ಯೂ ಇಯರ್ ಪಾರ್ಟಿ ಸಖತ್ ಜೋರು ಆಗಿ ಆಚರಿಸಬೇಕೆಂದುಕೊಂಡವರಿಗೆ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಕೇವಲ 5 ನಿಮಿಷದಲ್ಲಿ ಪಾರ್ಟಿ ಮುಗಿಸುವಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ.
ಇತ್ತೀಚೆಗೆ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಇಬ್ಬರು ಗೋಲಿಬಾರ್ ನಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ನ್ಯೂ ಇಯರ್ ಪಾರ್ಟಿ ಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಯಾವುದೇ ಪಾರ್ಟಿಗಳಾಗಿದ್ದರೂ, ಎಲ್ಲಾ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಕೇವಲ 5 ನಿಮಿಷದಲ್ಲಿ ಪಾರ್ಟಿ ಮುಗಿಯಬೇಕು . 12 ಗಂಟೆಯಿಂದ 12.5 ನಿಮಿಷದ ಒಳಗೆ ಎಲ್ಲಾ ಪಾರ್ಟಿಗಳು ಕ್ಲೋಸ್ ಆಗಬೇಕು. ಪಾರ್ಟಿ ಮುಗಿಸಿ ಮನೆಗೆ ತೆರಳಲು15 ನಿಮಿಷ ಕಲಾವಕಾಶ ನೀಡಲಾಗಿದೆ. ಇದರ ಆಚೆಗೆ ಪಾರ್ಟಿ ಆಚರಿಸಿದವರಿಗೆ ಕಾನೂನು ರೀತಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ ತಿಳಿಸಿದ್ಧಾರೆ.
ಎಲ್ಲಾ ಕಡೆ ಪೊಲೀಸ್ ಬಂದೋಬಸ್ತ್ ಇರಲಿದ್ದು, ಪೊಲೀಸರು ಮಸ್ತಿಯಲ್ಲಿ ಎಲ್ಲಾ ಪಾರ್ಟಿಯ ಮೇಲೆ ಕಣ್ಣು ಇಟ್ಟಿರುತ್ತಾರೆ. ಪ್ರತಿ ಪಾರ್ಟಿಯಲ್ಲಿ ಮಹಿಳಾ ಪೊಲೀಸ್ ಪರಿಸೀಲನೆ ನಡೆಸಲಿದ್ದಾರೆ ಎಂದರು.