Connect with us

Dvg Suddi-Kannada News

ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕೆ ಪ್ರವಾಸ ಹೋಗುವರಿಗೆ ಶಾಕ್..!

ರಾಜ್ಯ ಸುದ್ದಿ

ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕೆ ಪ್ರವಾಸ ಹೋಗುವರಿಗೆ ಶಾಕ್..!

ಡಿವಿಜಿ ಸುದ್ದಿ, ಚಿಕ್ಕಬಳ್ಳಾಪುರ : ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ನಂದಿ ಬೆಟ್ಟದ ಗಿರಿಧಾಮಕ್ಕೆ ಈ ಬಾರಿ ಹೊಸ ವರ್ಷಕ್ಕೆ ಹೋಗಬೇಕು ಅನ್ನೋ  ಯೋಜನೆ ಹಾಕಿಕೊಂಡವರಿಗೆ ಜಿಲ್ಲಾಡಳಿತ ಶಾಕ್ ನೀಡಿದೆ. ನಂದಿ ಬೆಟ್ಟದ ಮೇಲೆ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದೆ.

ನಾಳೆ (ಡಿ.31)ಸಂಜೆ 4 ಗಂಟೆಯಿಂದ  ಜ. 1 ಬೆಳಗ್ಗೆ 8 ಗಂಟೆ ವರೆಗೆ ನಿಷೇಧ ಹೇರಲಾಗಿದೆ. ರಾತ್ರಿ ವೇಳೆ ಬೆಟ್ಟದ ಮೇಲೆ ಪಾರ್ಟಿ ಆಯೋಜನೆ ಅವಕಾಶ ನೀಡುವುದರಿಂದ  ಅಹಿತಕರ ಘಟನೆ ನಡೆಯುವ  ಪ್ರಮಾಣ ಹೆಚ್ಚಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ  ಈ ಕ್ರಮ ಕೈಗೊಂಡಿದೆ.

ನಂದಿ ಬೆಟ್ಟ ಬೆಂಗಳೂರಿಗೆ ಸಾಕಷ್ಟು ಹತ್ತಿರ ಇರುವುದರಿಂದ ಸಿಲಿಕಾನ್ ಸಿಟಿಯ ಹೆಚ್ಚಿನ ಪ್ರವಾಸಿಗರು ಇಲ್ಲಿಆಗಮಿಸಲಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧ ಹೇರಲಾಗಿದೆ. ಬೆಟ್ಟ ಹತ್ತುವುದಕ್ಕೆ ಮಾತ್ರ ನಿರ್ಬಂಧ ಹೇರಲಾಗಿದ್ದು, ಉಳಿದಂತೆ ಬೆಟ್ಟದ ಕೆಳಗಿನ ತೊಪ್ಪಲಿನಲ್ಲಿ ಯಾವುದೇ ನಿಷೇಧ  ಇರುವುದಿಲ್ಲ.

 

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top