Connect with us

Dvgsuddi Kannada | online news portal | Kannada news online

ಹೊಸ ವರ್ಷ ‘2020’ ಸ್ವಾಗತಿಸಿದ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ

ಅಂತರಾಷ್ಟ್ರೀಯ ಸುದ್ದಿ

ಹೊಸ ವರ್ಷ ‘2020’ ಸ್ವಾಗತಿಸಿದ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ

ಡಿವಿಜಿ ಸುದ್ದಿ, ಬೆಂಗಳೂರು: ಇಡೀ ವಿಶ್ವವೇ ಹೊಸ ವರ್ಷ ಸ್ವಾಗತಕ್ಕೆ ಸಜ್ಜಾಗಿದೆ.  ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಜನರು ಈಗಾಗಲೇ 2020ಕ್ಕೆ ಸ್ವಾಗತ ಕೋರಿದ್ದಾರೆ. ಈ ಎರಡು ದೇಶದಲ್ಲಿ  ಹೊಸ ವರ್ಷದ ಸಂಭ್ರಮದಿಂದ ಜನರು ಬರ ಮಾಡಿಕೊಂಡರು.

ನ್ಯೂಜಿಲ್ಯಾಂಡ್‍ನ ಆಕ್ಲೆಂಡ್, ವೆಲ್ಲಿಂಗ್ಟನ್, ಕ್ರೈಸ್ಟ್‌ಚರ್ಚ್, ಹ್ಯಾಮಿಲ್ಟನ್, ಟೌರಂಗಾ, ನೇಪಿಯರ್, ಡುನೆಡಿನ್ ಸೇರಿದಂತೆ ವಿವಿಧ ನಗರಗಳು ಸೇರಿದಂತೆ ಪ್ರವಾಸಿ ತಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಣ್ಣ ಬಣ್ಣದ ದೀಪಗಳಿಂದ  ನಗರಗಳು ಜಗಮಗಿಸುತ್ತಿವೆ. ಜನರು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಪಟ್ಟರು.

ಇನ್ನು ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್, ಬ್ರಿಸ್ಬೇನ್, ಪರ್ತ್, ಅಡಿಲೇಡ್, ನ್ಯೂಕ್ಯಾಸಲ್, ಕ್ಯಾನ್ಬೆರಾದಲ್ಲಿ ಹೊಸ ವರ್ಷವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಜಪಾನ್, ದಕ್ಷಿಣ ಕೊರಿಯಾ, ಚೀನಾ, ಫಿಲಿಪೈನ್ಸ್, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್ ನಲ್ಲಿಯೂ 2020  ಸ್ವಾಗತಿಸಿದರು. ಜರ್ಮನಿ, ಯುನೈಟೆಡ್ ಕಿಂಗ್‍ಡಮ್, ಕೆನಡಾ ಬಳಿಕ ಅಮೆರಿಕ ಹೊಸ ವರ್ಷಾಚರಣೆ ಮಾಡಲಿದೆ. ಭಾರತದಲ್ಲಿ ವರ್ಷ ಆಚರಣೆಗೆ ಭಾರೀ ಸಿದ್ಧತೆ ನಡೆದಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

To Top