ನಾಲ್ಕು ದಶಕದ ಹೊಸಪೇಟೆ-ಹರಿಹರ ರೈಲ್ವೆ  ಹೋರಾಟಕ್ಕೆ ಫಲ, ನಾಳೆ ಉದ್ಘಾಟನೆಗೆ ಸಿದ್ಧವಾದ ನೂತನ  ರೈಲು, ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿಯಿಂದ ಚಾಲನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿಸುದ್ದಿ. ಹರಿಹರ : ನಾಲ್ಕು ದಶಕದ ಹೊಸಪೇಟೆ – ಹರಿಹರ ರೈಲು ಮಾರ್ಗ ಹೋರಾಟಕ್ಕೆ ಫಲ ಸಿಕ್ಕಿದೆ. ನಾಳೆ ನೂತನ ರೈಲು ಮಾರ್ಗಕ್ಕೆ ಚಾಲನೆ ಸಿಗಲಿದೆ.

ನಾಳೆ  ಹೊಸಪೇಟೆಯಿಂದ ಹರಿಹರಕ್ಕೆ  ರೈಲು ಸಂಚರಿಸುವ ಮೂಲಕ ಹಸಿರು ನಿಶಾನೆ ಸಿಗಲಿದೆ. ಹೊಸಪೇಟೆಯಲ್ಲಿ  ಬೆಳಗ್ಗೆ 11 ಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಹಸಿರು ನಿಶಾನೆ ತೋರಿಸಲಿದ್ದಾರೆ. 56529 ಸಂಖ್ಯೆಯ ರೈಲು  ಹರಿಹರ-ಕೊಟ್ಟೂರು-ಹೊಸಪೇಟೆ ಮತ್ತು 56530 ಸಂಖ್ಯೆಯ ಹೊಸಪೇಟೆ-ಕೊಟ್ಟೂರು-ಹರಿಹರಕ್ಕೆ ದಾವಣಗೆರೆ ಮಾರ್ಗವಾಗಿ ನಿತ್ಯ ಸಂಚರಿಸಲಿದೆ.

harihar hospete railway dvgsuddi 3

ಇಲ್ಲಿನ ಜನರಿಗೆ ಹರಪನಹಳ್ಳಿಯ ಪ್ರಸಿದ್ಧ ಚಿಗಟೇರಿ ನಾರದಮುನಿ, ಗುರು ಕೊಟ್ಟೂರೇಶ್ವರ, ಜಂಭುಲಿಂಗೇಶ್ವರ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುವರಿಗೆ ನೂತನ ರೈಲು ಕೊಂಡಿಯಾಗಿದೆ. ನೂತನ ರೈಲಿನ ಮೂಲಕ ಹರಿಹರದಿಂದ ಹೊಸಪೇಟೆಗೆ ವ್ಯಾಪಾರ ವ್ಯಹಾರವೂ ವೃದ್ಧಿಯಾದಂತಾಗುತ್ತದೆ.   ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತರಲು, ಪ್ರಯಾಣಿಕರು ಬೇರೆ ಬೇರೆ ಸ್ಥಳಗಳಿಗೆ ತೆರಳಲು ನೂತನ ಮಾರ್ಗ ಸಹಕಾರಿಯಾಗಲಿದೆ.

ಈ ಭಾಗದ ರೈತರಿಗೆ ಅದರಲ್ಲೂ ಜನ ಸಾಮಾನ್ಯರಿಗೆ ತುಂಬಾ ಅನುಕೂಲವಾಗಲಿದೆ.  ಶತಮಾನದ ಈ ರೈಲು ಮಾರ್ಗ ಬ್ರಿಟಿಷ್ರ ಕಾಲದಲ್ಲಿಯೇ ಶುರುವಾಗಿದ್ದು, ಕಾರಣಾಂತರದಿಂದ ನೆನೆಗುದಿಗೆ ಬಿದ್ದಿದ್ದ ರೈಲು ಯೋಜನೆ ಜನರ ಹೋರಾಟದ ಫಲವಾಗಿ ರೈಲು  ಸಂಚಾರಿಸಲು ಪ್ರಾರಂಭ ಆಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂಲಕ ಸಂಚಾರಿಸುವುದು ಎಲ್ಲಾರಿಗೂ ಖುಷಿಯ ವಿಚಾರ, ಸಾರ್ವಜನಿಕರಿಗೆ ಕಡಿಮೆ ಖರ್ಚಿನಲ್ಲಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಬರಲಿಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಹರಿಹರದ ಶೇಖರಪ್ಪ.

harihar hospete railway dvgsuddi 2ಹರಿಹರ – ಹೊಸಪೇಟೆ

ಹರಿಹರದಿಂದ ಬೆಳಗ್ಗೆ 7.20 ಕ್ಕೆ ಹೊರಟು, 7.25ಕ್ಕೆ ಅಮರಾವತಿ ಕಾಲೋನಿ, 7.45 ಕ್ಕೆ ದಾವಣಗೆರೆ, 8.03ಕ್ಕೆ ಅಮರಾವತಿ ಕಾಲೋನಿ, 8.22ಕ್ಕೆ ತೆಲಗಿ, 8.42 ಹರಪನಹಳ್ಳಿ, 9.05 ಕ್ಕೆ ಬೆಣ್ಣೆಹಳ್ಳಿ, 9.26 ಕ್ಕೆ ಕೊಟ್ಟೂರು, 9.50 ಮಾಲವಿ, 10.08  ಹಗರಿಬೊಮ್ಮನಹಳ್ಳಿ, 10.44 ಮರಿಯಮ್ಮನಹಳ್ಳಿ, 11 ಕ್ಕೆ ವ್ಯಾಸ ಕಾಲನಿ, 11.16 ಕ್ಕೆ ವ್ಯಾಸನಕೆರಿ, 11.32 ಕ್ಕೆ ತುಂಗಭದ್ರಾ ಡ್ಯಾಂ, ಮಧ್ಯಾಹ್ನ 12.10 ಕ್ಕೆ ಹೊಸಪೇಟೆ ತಲುಪಲಿದೆ.

ಹೊಸಪೇಟೆ – ಹರಿಹರ

ಹೊಸಪೇಟೆಯಿಂದ ಮಧ್ಯಾಹ್ನ 12.55 ಕ್ಕೆ ಹೊರಡುವ ರೈಲು, 1.05ಕ್ಕೆ ತುಂಗ್ರಭದ್ರಾ ಡ್ಯಾಂ, 1.15 ಕ್ಕೆ ವ್ಯಾಸನಕೇರಿ, 1.19ಕ್ಕೆ ವ್ಯಾಸ ಕಾಲನಿ, 1.34 ಮರಿಯಮ್ಮನಹಳ್ಳಿ, 1.53 ಹಂಪಾಪಟ್ಟಣ, 2.12 ಹಗರಿಬೊಮ್ಮನಹಳ್ಳಿ, 2.32 ಮಾಲವಿ, 3.02  ಕೊಟ್ಟೂರು, 3.32  ಬೆಣ್ಣೆಹಳ್ಳಿ, 3.45  ಹರಪನಹಳ್ಳಿ, 4.00  ತೆಲಗಿ, 5.01  ಅಮರಾವತಿ ಕಾಲೋನಿ, 5.25  ದಾವಣಗೆರೆ, 5.44  ಅಮರಾವತಿ ಕಾಲೋನಿ, 6.20 ಕ್ಕೆ ಹರಿಹರ ತಲುಪಲಿದೆ.

ದರ 10, 15 , 25,30, 35  ರೂಪಾಯಿ

ಹೊಸಪೇಟೆಯಿಂದ ದಾವಣಗೆರೆಗೆ 155 ಕಿಮೀ ಅಂತರವಿದ್ದು, ಹೊಸಪೇಟೆಯಿಂದ ವ್ಯಾಸ ಕಾಲೋನಿಗೆ 10  ಮರಿಯಮ್ಮನಹಳ್ಳಿಗೆ 10  ಹಂಪಾಪಟ್ಟಣಕ್ಕೆ 10  ರೂ., ಹಗರಿಬೊಮ್ಮನಹಳ್ಳಿಗೆ 10 ರೂ., ಮಾಲವಿಗೆ 15 ಕೊಟ್ಟೂರಿಗೆ 20, ಬೆಣ್ಣಿಹಳ್ಳಿಗೆ 25,  ಹರಪನಹಳ್ಳಿಗೆ 25, ತೆಲಗಿಗೆ 30, ದಾವಣಗೆರೆ, ಅಮರಾವತಿ ಕಾಲೋನಿ ಮತ್ತು ಹರಿಹರಕ್ಕೆ 35 ರೂಪಾಯಿ ನಿಗದಿಪಡಿಸಿದೆ.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *