Connect with us

Dvgsuddi Kannada | online news portal | Kannada news online

ಜುಲೈ 15ರೊಳಗೆ ಸಿಬಿಎಸ್ ಇ 10, 12ನೇ ತರಗತಿ ಫಲಿತಾಂಶ

ರಾಷ್ಟ್ರ ಸುದ್ದಿ

ಜುಲೈ 15ರೊಳಗೆ ಸಿಬಿಎಸ್ ಇ 10, 12ನೇ ತರಗತಿ ಫಲಿತಾಂಶ

ನವದೆಹಲಿ ಸಿಬಿಎಸ್ ಇ 10 ಮತ್ತು 12ನೇ ತರಗತಿಯ ‍ಫಲಿತಾಂಶವನ್ನು ಜುಲೈ 15ರೊಳಗೆ ಪ್ರಕಟಿಸಲಾಗುವುದು ಎಂದು ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ  ತಿಳಿಸಿದೆ.

ಕೊರೊನಾ ವೈರಸ್ ನಿಂದಾಗಿ  10, 12ನೇ ತರಗತಿಯ ಬಾಕಿ  ವಿಷಯಗಳ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಇದರಿಂದ ಪರ್ಯಾಯ ಮೌಲ್ಯಮಾಪನ ಆಧಾರದಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ತಿಳಿಸಿದೆ.

ಅಲ್ಲದೆ 12ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಿ ಪರೀಕ್ಷೆಗಳನ್ನು ನಡೆಸಲಾಗುವುದು. ಆದರೆ, ಈ ವೇಳೆ ಅಸೆಸ್‌ಮೆಂಟ್‌ ಸ್ಕೀಂನ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ದ್ವಿತೀಯ ಬಾರಿ ನಡೆಸಿದ ಪರೀಕ್ಷೆಗಳ ಅಂಕಗಳೇ ಅಂತಿಮವಾಗಿರುತ್ತವೆ .

10ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷಾ ಬರೆಯಲು ಅವಕಾಶವಿರುವುದಿಲ್ಲ. ಅಸೆಸ್‌ಮೆಂಟ್‌ ಸ್ಕೀಂನ ಆಧಾರದಲ್ಲಿ ಅವರ ಪರೀಕ್ಷಾ ಫಲಿತಾಂಶವನ್ನು ಘೋಷಿಸಲಿದ,  ಅಸೆಸ್‌ಮೆಂಟ್‌ ಸ್ಕೀಂನ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದ ಬಳಿಕ ಮಂಡಳಿ ಫಲಿತಾಂಶ ಪ್ರಕಟಿಸಲು ನಿರ್ಧರಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top