Connect with us

Dvg Suddi-Kannada News

ದೇಶದಲ್ಲಿ ಒಂದೇ ದಿನ 1,409 ಕೋವಿಡ್-19 ಪ್ರಕರಣ ಪತ್ತೆ

ಪ್ರಮುಖ ಸುದ್ದಿ

ದೇಶದಲ್ಲಿ ಒಂದೇ ದಿನ 1,409 ಕೋವಿಡ್-19 ಪ್ರಕರಣ ಪತ್ತೆ

ನವದೆಹಲಿದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1409 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 21,393ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗ್ರವಾಲ್‌,  ಕಳೆದ 24 ಗಂಟೆಗಳಲ್ಲಿ 1409 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೂ ದೇಶದಾದ್ಯಂತ 21,393 ಪ್ರಕರಣ ದಾಖಲಾಗಿದೆ.  ಕಳೆದ 28 ದಿನಗಳಲ್ಲಿ ದೇಶದ 12 ಜಿಲ್ಲೆಗಳಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಎಂದರು.

ಇನ್ನು ಕಳೆದ 14 ದಿನಗಳಲ್ಲಿ 78 ಜಿಲ್ಲೆಗಳಲ್ಲಿ  ಯಾವುದೇ ಹೊಸ ಕೊರೊನಾ ವೈರಸ್‌ ಪ್ರಕರಣ ಪತ್ತೆಯಾಗಿಲ್ಲ. ದೇಶದಾದ್ಯಂತ 4,257 ಮಂದಿ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ 16,454 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 681 ಮಂದಿ ಮೃತಪಟ್ಟಿದ್ದಾರೆ ಎಂದು ಎಂದು ಮಾಹಿತಿ ನೀಡಿದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top