Connect with us

Dvg Suddi-Kannada News

ಮುಂದಿನ ದಿನಗಳಲ್ಲಿ ಮಾಸ್ಕ್ ಜೀವನದ ಒಂದು ಭಾಗವಾಗಲಿದೆ: ಪ್ರಧಾನಿ ನರೇಂದ್ರ ಮೋದಿ

ಪ್ರಮುಖ ಸುದ್ದಿ

ಮುಂದಿನ ದಿನಗಳಲ್ಲಿ ಮಾಸ್ಕ್ ಜೀವನದ ಒಂದು ಭಾಗವಾಗಲಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಲ್ಲಿ  ಹೇರಲಾಗಿರುವ ಲಾಕ್‍ಡೌನ್‍ನಿಂದ ಸಾವಿರಾರು ಜೀವಗಳನ್ನು ರಕ್ಷಿಸಲಾಗಿದೆ. ಆದರೆ, ಕೊರೊನಾ ವೈರಸ್ ಮುಂಬರುವ  ದಿನಗಳಲ್ಲಿಯೂ ಕಾಣಿಸಿಕೊಳ್ಳುವ  ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಾಸ್ಕ್ ಜೀವನದ ಒಂದು ಭಾಗವಾಗಿರಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆರೆ ನೀಡಿದರು.

ಕಾಲ್ ಡೌನ್ ಮತ್ತು ಕೊರೊನಾ ವೈರಸ್ ನಿಯಂತ್ರಣ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆ ವೇಳೆ ಪ್ರಧಾನಿ ಮೋದಿ,  ಮಾಸ್ಕ್ ಬಳಕೆ ಕುರಿತು ಗಮನಹರಿಸುವಂತೆ ಸೂಚಿಸಿದರು.

ಸಭೆಯಲ್ಲಿ ಎಲ್ಲ ರಾಜ್ಯದ ಸಿಎಂಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.  ಕೊರೊನಾ ವಿರುದ್ಧ  ಕ್ಷಿಪ್ರವಾಗಿ ಸ್ಪಂದಿಸಬೇಕು.  ಕೆಂಪು ವಲಯಗಳನ್ನು ಕಿತ್ತಳೆ, ಕಿತ್ತಳೆ ವಲಯವನ್ನು ಹಸಿರು ವಲಯವನ್ನಾಗಿ ಪರಿವರ್ತಿಸಲು ರಾಜ್ಯಗಳು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಕೊರೊನಾ ಸಂಕಷ್ಟ ಸಂದರ್ಭದಲ್ಲಿ  ಧೈರ್ಯದಿಂದ ಪರಿಸ್ಥಿತಿ ನಡುವೆ ನಿಭಾಯಿಸಬೇಕು.  ಆರ್ಥಿಕತೆಯ ಪುನರುಜ್ಜೀವನದ ಜೊತೆಗೆ ಕೊರೊನಾ ವಿರುದ್ಧ ಹೋರಾಟ ಮುಂದುವರಿಸಬೇಕು. ಬೇಸಿಗೆ ಮತ್ತು ಮುಂಗಾರು ಆರಂಭವಾಗಲಿದ್ದು ಈ ನಡುವೆ ಹವಾಮಾನ ಬದಲಾಗಲಿದೆ. ಈ ವೇಳೆ ಹಲವು ರೋಗಗಳು ಉಲ್ಬಣವಾಗಲಿದೆ ಈ ಬಗ್ಗೆ ರಾಜ್ಯ ಸರ್ಕಾರ ಮುಂಜಾಗೃತಿ ಕೈಗೊಳ್ಳಬೇಕು.

ನಾವು ಯಾವ ರಾಜ್ಯಗಳ ನಡುವೆಯೂ  ತಾರತಮ್ಯ ಮಾಡುವುದಿಲ್ಲ.  ಎಲ್ಲ ರಾಜ್ಯಗಳನ್ನು ಕೇಂದ್ರ ಸರ್ಕಾರ ಏಕ ರೂಪದಲ್ಲಿ ನೋಡಲಿದ್ದು ಕೊರೊನಾ ಸಂಕಷ್ಟದಿಂದ ಹೊರ ಬರಲು ಶ್ರಮಿಸೋಣ ಎಂದು ಕರೆ ನೀಡಿದರು.

 

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top