ನವದೆಹಲಿ: ಕೊರೊನಾ ಮಹಾಮಾರಿಗೆ ಇಡೀ ದೇಶ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಕೋವಿಡ್–19 ಹೊಸದಾಗಿ 1,383 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 50 ಮಂದಿ ಸಾವಿಗೀಡಾಗಿದ್ದಾರೆ.
ಒಂದೇ ದಿನ ಹೊಸದಾಗಿ1,383 ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 19,984ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ತಿಳಿಸಿದೆ.
19,984 ಕೋವಿಡ್–19 ಪ್ರಕರಣಗಳಲ್ಲಿ 3,869 ಮಂದಿ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ 15,474 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 640 ಮಂದಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟು 5,218 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಈಗಾಗಲೇ 251 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಾವು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಇನ್ನೂ ದೆಹಲಿಯಲ್ಲಿ ಒಟ್ಟು 2,156 ಪ್ರಕರಣಗಳು, 47 ಮಂದಿ ಸಾವು; ತಮಿಳುನಾಡಿನಲ್ಲಿ 1,596 ಪ್ರಕರಣಗಳು,18 ಮಂದಿ ಸಾವು; ರಾಜಸ್ಥಾನದಲ್ಲಿ 1,659 ಪ್ರಕರಣಗಳು, 25 ಮಂದಿ ಸಾವಿಗೀಡಾಗಿದ್ದಾರೆ.
ಕರ್ನಾಟಕದಲ್ಲಿ 418 ಸೋಂಕು ಪ್ರಕರಣಗಳು ದಾಖಲಾಗಿದ್ದು,17 ಮಂದಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ 1,552 ಸೋಂಕು ಪ್ರಕರಣಗಳ ಪೈಕಿ 76 ಮಂದಿ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದಲ್ಲಿ 757 ಪ್ರಕರಣ, 22 ಮಂದಿ ಸಾವು ಹಾಗೂ ತೆಲಂಗಾಣದಲ್ಲಿ 928 ಪ್ರಕರಣಗಳು, 23 ಜನ ಸಾವಿಗೀಡಾಗಿದ್ದಾರೆ.



