ಅಹಮದಾಬಾದ್: ಗುಜರಾತಿನ ಹಿರಿಯ ಕಾಂಗ್ರೆಸ್ ನಾಯಕ 67 ವರ್ಷದ ಬದ್ರುದ್ದೀನ್ ಶೇಖ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಮೊದಲ ಬಾರಿಗೆ ರಾಜಕೀಯ ನಾಯಕರೊಬ್ಬರು ಕೊರೊನಾ ವೈರಸ್ ಗೆ ಬಲಿಯಾದಂತಾಗಿದೆ.
ಏಪ್ರಿಲ್ 15 ರಂದು ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಬದ್ರುದ್ದೀನ್ ಶೇಖ್ ಅವರನ್ನು ಅಹಮದಾದಬಾದಿನ ಎಸ್‍ವಿಪಿ ಆಸ್ಪತ್ರೆಗೆ ದಾಖಲಾಗಿದ್ದರು. 11 ದಿನಗಳ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಬದ್ರುದ್ದೀನ್ ಶೇಖ್ ಅವರು ಬಡವರಿಗೆ ಆಹಾರ ವಿತರಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಶೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿಸಿನ್ಹಾ ಗೋಹಿಲ್ ಟ್ವಿಟ್ಟರ್ ನಲ್ಲಿ ಮಾತನಾಡಿ, ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಬದ್ರುಬಾಯ್ ಅವರ 40 ವರ್ಷಗಳಿಂದ ಚಿರ ಪರಿಚಿತರು. ಯೂತ್ ಕಾಂಗ್ರೆಸ್ ನಿಂದ ಪಕ್ಷ ಕಟ್ಟಿದ್ದಾರೆ ಎಂದು ಹೇಳಿ ಕಂಬನಿ ಮಿಡಿದಿದ್ದಾರೆ. ಅಹಮದಾಬಾದ್ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಬದ್ರುದ್ದೀನ್, ಗುಜರಾತಿನ ಕಾಂಗ್ರೆಸ್ಸಿನ ವಕ್ತಾರರಾಗಿ ಸಹ ಕಾರ್ಯ ನಿರ್ವಹಿಸಿದ್ದರು.
अहमदाबाद के जननेता, कांग्रेस के हमारे वरिष्ठ साथी , अहमदाबाद नगर निगम में कांग्रेस के पार्षद और पूर्व प्रतिपक्ष के नेता बदरुद्दीन शेख का इंतकाल कोरोना महामारी का सामना करते करते हो गया। इस कोरोना योद्धा को मेरा सलाम। pic.twitter.com/xHbZAifKC3
— Shaktisinh Gohil MP (@shaktisinhgohil) April 26, 2020