ಡಿವಿಜಿ ಸುದ್ದಿ,ತುಮಕೂರು: ಕನಕ ವೃತ್ತ ನಾಮಫಲಕ ವಿಚಾರವಾಗಿ ವಾಗ್ವಾದ ನಡೆದಿದ್ದು ನಿಜ. ಆದರೆ, ಸಚಿವ ಮಾಧುಸ್ವಾಮಿ ಅವರು ತಮ್ಮನ್ನು ಏಕವಚನದಲ್ಲಿ ನಿಂಧಿಸಿಲ್ಲ ಎಂದು ಕಾಗಿನೆಲೆಯ ಈಶ್ವರಾನಂದ ಪುರಿ ಶ್ರೀಗಳು ಸ್ಪಷ್ಟಪಡಿಸಿದ್ರು.
ಸಚಿವ ಮಾಧುಸ್ವಾಮಿಯವರು ಕುರುಬ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ರಾಜ್ಯದಲ್ಲಿ ಸಮಾಜ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸಚಿವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಆ ದಿನ ಮಾಧುಸ್ವಾಮಿ ತಮ್ಮನ್ನು ಏಕವಚನದಲ್ಲಿ ನಿಂದಿಸಿಲ್ಲ. ಇಂತಹ ವಿಚಾರವನ್ನು ದೊಡ್ಡದು ಮಾಡಬಾರದು. ಇದಕ್ಕೆ ತೆರೆ ಎಳೆಯಬೇಕೆಂದು ತಿಳಿಸಿದರು.



