ಡಿವಿಜಿ ಸುದ್ದಿ, ಕಲಬುರ್ಗಿ: ರಾಜ್ಯದಲ್ಲಿ ಈಗಾಗಲೇ ಕಾಶ್ಮೀರದ ಮೂರು ವಿದ್ಯಾರ್ಥಿಗಳು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ವಿರೋಧಿ ಪ್ರತಿಭಟನಾ ಸಮಾರಂಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಜೈಲು ಸೇರಿದ್ದಾರೆ. ಇಂತಹದ್ದೇ ಪ್ರಕರಣ ರಾಜ್ಯದಲ್ಲಿ ಮತ್ತೆ ಮರುಕಳಿಸಿದೆ. ಕುಲಬುರ್ಗಿಯಲ್ಲಿ ಗೋಡೆ ಮೇಲೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬರೆದು ಪರಾರಿಯಾದ ಘಟನೆ ನಡೆದಿದೆ.
ಸಾಥ್ ಗುಂಬಜ್ ಬಳಿಯ ಮನೆಯೊಂದರ ಗೋಡೆ ಮೇಲೆ ದುಷ್ಕರ್ಮಿಗಳು ಪಾಕಿಸ್ತಾನ ಜಿಂದಾಬಾದ್ ಬರೆದಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿ ಬರಹ ಬರೆದಿದ್ದಾರೆ. ಕಳೆದ ರಾತ್ರಿ ಬರೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಧಾವಿಸಿದ ಚೌಕ್ ಠಾಣೆ ಪೊಲೀಸರು ಬರಹವನ್ನು ಅಳಿಸಿದ್ದಾರೆ.



