Connect with us

Dvg Suddi-Kannada News

ವಿಡಿಯೋ : ಜಡೇಜಾ ಗಾಳಿಯಲ್ಲಿ ಹಾರಿ, ಒಂದೇ ಕೈಯಲ್ಲಿ ಹಿಡಿದ ಕ್ಯಾಚ್ ಸಖತ್ ವೈರಲ್..!

ಪ್ರಮುಖ ಸುದ್ದಿ

ವಿಡಿಯೋ : ಜಡೇಜಾ ಗಾಳಿಯಲ್ಲಿ ಹಾರಿ, ಒಂದೇ ಕೈಯಲ್ಲಿ ಹಿಡಿದ ಕ್ಯಾಚ್ ಸಖತ್ ವೈರಲ್..!

ಕ್ರೈಸ್ಟ್ ಚರ್ಚ್:  ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತೊಮ್ಮೆ ತಮ್ಮ ಅತ್ಯುತ್ತಮ ಫೀಲ್ಡಿಂಗ್ ನಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಎತ್ತರದಲ್ಲಿದ್ದ ಚೆಂಡನ್ನು ಹಾರಿ ಒಂದೇ ಕೈಯಲ್ಲಿ ಹಿಡಿಯುವ ಮೂಲಕ ಅಚ್ಚರಿಗೊಳಿಸಿದ್ದಾರೆ.

ಶಮಿ ಎಸೆದ 72ನೇ ಓವರಿನ ಕೊನೆ ಎಸೆತವನ್ನು ನೀಲ್ ವ್ಯಾಗ್ನರ್  ಹೊಡೆದ ಬಾಲ್ ಅನ್ನು ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಹಿಡಿದಿದ್ದಾರೆ. ಈ ವಿಡಿಯೋ  ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗಿದೆ. ಬಾಲ್ ಸಿಕ್ಸ್ ಅಥವಾ ಬೌಂಡರಿಗೆ  ಹೋಯಿತು ಎಂದೇ ಭಾವಿಸಲಾಗಿತ್ತು. ಆದರೆ,  ಡೀಪ್ ಸ್ಕ್ಯಾರ್ ಲೆಗ್ ನಲ್ಲಿದ್ದ ಫೀಲ್ಡಿಂಗ್ ಮಾಡುತ್ತಿದ್ದ ಜಡೇಜಾ ಗಾಳಿಯಲ್ಲಿ ಮೇಲಕ್ಕೆ ಹಾರಿ ಹಿಡಿದೇ ಬಿಟಗ್ಟರು. ಆ ಒಂದು ಕ್ಷಣ  ಬೌಲರ್ ಶಮ್ಮಿ ಸೇರಿದಂತೆ ಸಹ ಆಟಗಾರರು ಸೇರಿದಂತೆ ಆಶ್ಚರ್ಯಚಕಿತರಾಗಿ ಸಂಭ್ರಮಿಸಿದರು.

ಫಿಲ್ಡಿಂಗ್ ನಲ್ಲಿ ಮಾತ್ರವಲ್ಲದೆ ಬೌಲಿಂಗ್‍ನಲ್ಲೂ ಮಿಂಚಿದ ಜಡೇಜಾ 10 ಓವರ್ ಗಳಲ್ಲಿ 2 ಮೇಡನ್ ಸಹಿತ 22 ರನ್ ನೀಡಿ 2 ವಿಕೆಟ್ ಪಡೆದರು. ಜಡೇಜಾ ಕ್ಯಾಚ್ ಹಿಡಿದ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜಡೇಜಾ ಅವರನ್ನು ಅಭಿನಂದಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top