Connect with us

Dvg Suddi-Kannada News

ಜಲ ಸಿರಿ ಯೋಜನೆಯಿಂದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು: ಸತ್ಯಚಂದ್ರ

ಮುಖಪುಟ

ಜಲ ಸಿರಿ ಯೋಜನೆಯಿಂದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು: ಸತ್ಯಚಂದ್ರ

ಡಿವಿಜಿ ಸುದ್ದಿ, ದಾವಣಗೆರೆ: ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ 24 × 7 ನಿರಂತರ ನೀರು ಸರಬರಾಜು ಮಾಡುವ ಜಲ ಸಿರಿ ಯೋಜನೆ ತುಂಬಾ ಉಪಯುಕ್ತವಾಗಿದ್ದು,  ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸುಯೇಜ್ ಪ್ರೊಜೆಕ್ಟ್ಸ್ ಪ್ರೆ. ಲಿಮಿಟೆಡ್‌ನ ಮ್ಯಾನೇಜರ್ ಸತ್ಯಚಂದ್ರ ತಿಳಿಸಿದರು.

ದಾವಣಗೆರೆ ಮಹಾನಗರ ಪಾಲಿಕೆ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ದಾವಣಗೆರೆ, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕ ದಾವಣಗೆರೆ ಹಾಗೂ ಸುಯೋಜ್ ಪ್ರಾಜೆಕ್ಟ್ ಪ್ರೊಜೆಕ್ಟ್ಸ್ .ಲಿ. ಸಹಯೋಗದೊಂದಿಗೆ  ನಿಟ್ಟುವಳ್ಳಿ ಹೊಸ ಬಡಾವಣೆಯ ಲೆನಿನ್ ನಗರದ  ವೀಣಾಕೃಷ್ಣಮೂರ್ತಿ  ಅವರ ನಿವಾಸದಲ್ಲಿ ಜಲ ಸಿರಿ ಯೋಜನೆ ಅನುಷ್ಠಾನ ಕುರಿತ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಜನೆಯ ಅಂಗವಾಗಿ ನಗರದ 1,600 ಕಿ.ಮೀ.ಉದ್ದ ಕುಡಿಯುವ ಪೈಪ್‌ಲೈನ್, ಈಗಾಗಲೇ ಇರುವ 32 ಮೇಲ್ಮಟ್ಟದ ಜಲಾಗಾರಗಳ ಪುನಶ್ಚೇತನದ ಜೊತೆಗೆ  ಹೊಸದಾಗಿ 19  ಮೇಲ್ಮಟ್ಟದ ಜಲಾಗಾರಗಳನ್ನು ನಿರ್ಮಿಸಲಾಗುವುದ. ನಗರದ ಪ್ರತಿಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಕೈಗೆಟುಕುವ ದರದಲ್ಲಿ ಪೂರೈಸುವ ಉದ್ದೇಶದಿಂದ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಯಾವುದೇ ಅನುಮಾನಗಳಿದ್ದರೆ ಕೇಳಿ ತಿಳಿದುಕೊಂಡು ಯೋಜನೆಯ ಯಶಸ್ವಿಗೆ ಕೈಜೋಡಿಸಿ ಸಹಕರಿಸಲು ಕೋರಿದರು.

ಕೆ.ಯು.ಐ.ಡಿ.ಎಫ್.ಸಿ.ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮಾತನಾಡಿ, ದಾವಣಗೆರೆ ನಗರದ ಎಲ್ಲಾ ಮನೆಗಳಿಗೂ ಶುದ್ಧ ನೀರನ್ನು ಪೂರೈಸುವ ಜಲಸಿರಿ ಯೋಜನೆಯಡಿ ಮೀಟರ್ ಅಳವಡಿಸಲಾಗುವುದು. ಈ ಮೂಲಕ ನೀರು ಶುದ್ಧೀಕರಣ ಘಟಕಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಹೊಸ ಯೋಜನೆ ಜಾರಿಯಾದನಂತರ ಮನೆಯ ಎರಡನೇ ಅಂತಸ್ತಿನವರೆಗೆ ಅಂದರೆ ಅಂದಾಜು 7 ಮೀಟರ್   ಎತ್ತರದ ವರೆಗೂ ನೀರು, ಯಾವುದೇ ಎಲೆಕ್ಟ್ರಿಕ್ ಮೋಟರ್ ಸಹಾಯ ಇಲ್ಲದೆ ಸರಬರಾಜಾಗುತ್ತದೆ. ಪಾಲಿಕೆಗೆ ನೀರಿನ ಕಂದಾಯ ಬಾಕಿ ಉಳಿಸಿಕೊಳ್ಳದಂತೆ ಸಲಹೆ ನೀಡಿವುದು. ನಿಗದಿತ ಸಮಯಕ್ಕೆ ಸರಿಯಾಗಿ ನೀರಿನ ತೆರಿಗೆ ಪಾವತಿಸಿದರೆ ಜಲ ಸಿರಿ ಯೋಜನೆ ಯಶಸ್ವಿಯಾಗುತ್ತದೆ ಎಂದರು.

ಈ ಯೋಜನೆಯಿಂದ  ಏನು ಉಳಿತಾಯ

  1.  ನೀರಿನ ಸಂಪ್ ಮತ್ತು ವಾಟರ್ ಟ್ಯಾಂಕ್ ನಿರ್ಮಿಸುವ ಹಣ ಉಳಿತಾಯ
  2.  ಹಣ ಕೊಟ್ಟು ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಿಕೊಳ್ಳುವುದು ಉಳಿಯ
  3. ನೀರಿನಿಂದ ಉಂಟಾಗುವ ಕಾಯಿಲೆಗಳಿಂದ ಮುಕ್ತಿ
  4. ನೀರಿಗೋಸ್ಕರ ಕಾಯುವುದು ತಪ್ಪುತ್ತದೆ
  5. ನೀರಿಗಾಗಿ ಒಂದು ದಿನ ಸಮಯ ವ್ಯರ್ಥ್ಯವಾಗುವುದನ್ನು ತಡೆಯಬಹುದು

ಸಂಸ್ಥೆಯ ಸಾರ್ವಜನಿಕ ಸಂವಹನ ಅಧಿಕಾರಿ ವಿ.ಕೆ.ನರಸಿಂಹಮೂರ್ತಿ ಮಾತನಾಡಿ, ಜಲಸಿರಿ ಯೋಜನೆಯಡಿ ಕೈಗೊಂಡ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಈ ಯೋಜನೆ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತದೆ. ಆದ್ದರಿಂದ ಈ ಯೋಜನೆ ಯಶಸ್ವಿಗೆ ಎಲ್ಲರೂ ಕೈ ಜೋಡಿಸಿ ಏನಾದರೂ ಸಮಸ್ಯೆ ಕೇಳಿ ಪರಿಹರಿಸಿಕೊಳ್ಳಿ ಎಂದರು. ನಮ್ಮ ಸಂಸ್ಥೆ ಸದಾ ನಿಮ್ಮೊಂದಿಗೆ ಇರುತ್ತದೆ. ನಿಮ್ಮೆಲ್ಲರ ಸಹಕಾರ, ಸಲಹೆ ಅಗತ್ಯ. ನೀವು ನೀಡಿದ ಸಲಹೆಗಳನ್ನು ಮುಂದಿನ ಸಭೆಯಲ್ಲಿ ಇಟ್ಟು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಕ್ಕಳಲೋಕ ಸಂಸ್ಥಾಪಕ ಅಧ್ಯಕ್ಷ ಕೆ.ಎನ್.ಸ್ವಾಮಿ ಮಾತನಾಡಿ, ಇದೊಂದು ಜನಪರ ಯೋಜನೆಯಾಗಿದೆ. ಇದರಿಂದ ಜನರಿಗೆ ಉಪಯೋಗವಾಗಲಿದೆ. ಏನಾದರೂ ತೊಂದರೆ ಕಂಡುಬಂದರೆ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ. ಸಾರ್ವಜನಿಕರು ಜಲಸಿರಿ ಯೋಜನೆಯ ಯಶಸ್ವಿಗೆ ಸಹಕರಿಸುವಂತೆ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಿವೃತ್ತ ಅಭಿಯಂತರ ಎಚ್.ಎನ್.ಕೃಷ್ಣಮೂರ್ತಿ ಮಾತನಾಡಿ, ಈ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿದೆ. ಸಾರ್ವಜನಿಕರು ತಮ್ಮಲ್ಲಿರುವ ಅನುಮಾನ ಬಗೆಹರಿಸಿಕೊಂಡಿದ್ದಾರೆ. ಸಂಸ್ಥೆಯವರು ಕೂಡಾ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಿ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದರು.

ಆರೋಗ್ಯ ಮತ್ತು ಸುರಕ್ಷತೆ ಅಧಿಕಾರಿ ಸನೂಪ್, ಲೇಖಕಿ ಎ.ಬಿ.ರುದ್ರಮ್ಮ ಸೇರಿದಂತೆ ನಿಟ್ಟುವಳ್ಳಿ ಹೊಸ ಬಡಾವಣೆಯ ಲೆನಿನ್ ನಗರದ ಅನೇಕ ಹಿರಿಯರು, ಮಹಿಳೆಯರು ಸಂವಾದದಲ್ಲಿ ಉಪಸ್ಥಿತರಿದ್ದರು. ಬಸವರಾಜ್ ಪ್ರಾರ್ಥಿಸಿದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ವೀಣಾ ಕೃಷ್ಣಮೂರ್ತಿ ಸ್ವಾಗತಿಸಿದರು. ಹರಿಹರದ ಚಿಂತನ ಪ್ರತಿಷ್ಠಾನದ ಕಾರ್ಯದರ್ಶಿ ಡಿ.ಫ್ರಾನ್ಸಿಸ್ ಕಾರ್ಯಕ್ರಮ ನಿರೂಪಿಸಿದರು. ಚಿಂತನ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ವಂದಿಸಿದರು.

Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top