ಡಿವಿಜಿ ಸುದ್ದಿ, ಬೆಂಗಳೂರು:ಕಳೆದ ವರ್ಷ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಸಲು ವಿಫಲವಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇದೀಗ 2020 ರಲ್ಲಿ ಚಂದ್ರಯಾನ -3ರ ಗುರಿ ಹಾಕಿಕೊಂಡಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ಹೇಳಿದರು.
ಬೆಂಗಳೂರಿನ ಅಂತರಿಕ್ಷ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಿವನ್ ಯಲ್ಲಿ ಮಾತನಾಡಿದ ಅವರು, ಲ್ಯಾಂಡರ್ ಮತ್ತು ರೋವರ್ ಮಾದರಿಗೆ 250 ಕೋಟಿ , ಉಡಾವಣೆಗೆ 365 ಕೋಟಿ ಸೇರಿ ಚಂದ್ರಯಾನ 3ಕ್ಕೆ ಒಟ್ಟು 615 ಕೋಟಿ ರೂಪಾಯಿ ಖರ್ಚಾಗಲಿದೆ. ಚಂದ್ರಯಾನ 3ರಲ್ಲಿ ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಶನ್ ಮಾಡ್ಯೂಲ್ ಇರಲಿದ್ದ, ಸರಕಾರ ಯೋಜನೆಗೆ ಒಪ್ಪಿಗೆ ನೀಡಿದೆ. ನಾವು ಯೋಜನೆಯ ತಂಡ ರಚಿಸಿಕೊಂಡ ಕೆಲಸ ಆರಂಭಿಸಿದ್ದೇವೆ ಎಂದರು.

ಈ ವರ್ಷವೇ ಉಡಾವಣೆಯ ಗುರಿ ಹಾಕಿಕೊಂಡಿದ್ದೇವೆ. ಆದರೆ ಇದು ಮುಂದಿನ ವರ್ಷಕ್ಕೂ ಹೋಗಬಹುದು. 2020ರ ನವೆಂಬರ್‌ನಲ್ಲೇ ಇದನ್ನು ಉಡಾವಣೆ ಮಾಡಲು ಇಸ್ರೋ ಯೋಜನೆ ರೂಪಿಸಿದೆ.
ಚಂದ್ರಯಾನ – 2ರಲ್ಲಿ ಆರ್ಬಿಟರ್ ಇಂಧನವನ್ನು ಹೊಂದಿತ್ತು. ಲ್ಯಾಂಡರ್ ಕಕ್ಷೆಗಾಮಿಯಿಂದ ಬೇರ್ಪಡುವವರೆಗೆ ಕಕ್ಷೆಗಳ ಬದಲಾವಣೆಗೆ ಇದನ್ನು ಬಳಸಲಾಗಿತ್ತು. ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಕಕ್ಷೆಯ ಬದಲಾವಣೆಗಳನ್ನು ಮಾಡಲು ಇಸ್ರೋ ನಿರ್ಧರಿಸಿದೆ. ಭೂಮಿ ಸುತ್ತ 6 ಮ್ಯಾನುವರ್ಸ್‌ಗಳ ಬದಲು ನಾವು ಮೂರರಿಂದ ನಾಲ್ಕನ್ನು ಮಾತ್ರ ಇಡಲಿದ್ದೇವೆ ಎಂದರು.
ಮೊದಲ ಮಾನವ ಸಹಿತ ಗಗನಯಾನವನ್ನುಈ ವರ್ಷ ನಾವು ನಡೆಸಲಿದ್ದೇವೆ. ಅಂತಿಮ ನಾಲ್ವರು ಗಗನಯಾನಿಗಳನ್ನು ಆಯ್ಕೆ ಮಾಡಲಾಗಿದ್ದು ಜನವರಿಯ ಮೂರನೇ ವಾರದಿಂದ ರಷ್ಯಾದಲ್ಲಿ ಅವರ ತರಬೇತಿ ಆರಂಭವಾಗಲಿದೆ . ಈ ವರ್ಷ 25ಕ್ಕೂ ಹೆಚ್ಚು ಯೋಜನೆಗಳನ್ನು ಇಸ್ರೋ ಹಾಕಿಕೊಂಡಿದೆ ಎಂದು ತಿಳಿಸಿದರು.



