Connect with us

Dvg Suddi-Kannada News

ಮೋದಿ ಇರೋವರೆಗೂ ಭಾರತ-ಪಾಕ್ ಪಂದ್ಯ ನಡೆಯಲ್ಲ: ಅಫ್ರಿದಿ

ಪ್ರಮುಖ ಸುದ್ದಿ

ಮೋದಿ ಇರೋವರೆಗೂ ಭಾರತ-ಪಾಕ್ ಪಂದ್ಯ ನಡೆಯಲ್ಲ: ಅಫ್ರಿದಿ

ಇಸ್ಲಾಮಾಬಾದ್: ಭಾರತ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರೋವರೆಗೂ ಭಾರತ-ಪಾಕಿಸ್ತಾನ  ದ್ವಿಪಕ್ಷೀಯ ಕ್ರಿಕೆಟ್  ಸರಣಿ ನಡೆಯಲ್ಲ ಎಂದು ಪಾಕಿಸ್ತಾನ ಮಾಜಿ ಆಟಗಾರ ಶಾಹೀದ್ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು,  ಪಾಕ್-ಭಾರತ ನಡುವೆ ಸರಣಿ ನಡೆಯದಿರಲು ಪ್ರಧಾನಿ ನರೇಂದ್ರ ಮೋದಿ ಕಾರಣ. ಅವರು ಅಧಿಕಾರದಲ್ಲಿ ಇರೋ ವರೆಗೂ ಟೂರ್ನಿ ನಡೆಸಲು ಬಿಡಲ್ಲ. ಮೋದಿ ಪಾಕಿಸ್ತಾನದ ವಿರುದ್ಧ ಯಾವಾಗಲೂ ನಕರಾತ್ಮಕವಾಗಿ ಯೋಚನೆ ಮಾಡುತ್ತಾರೆ. ಅವರ ಈ ನಿರ್ಧಾರದಿಂದಲೇ ಎರಡು ದೇಶಗಳ ನಡುವಿನ ಸ್ನೇಹ ವಾತಾವರಣ ನಿರ್ಮಾಣವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಲು ಪಿಸಿಬಿ ಪ್ರಯತ್ನ ಮೆಚ್ಚುವಂತಹದು.  ಅಲ್ಲದೇ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್‍ನಲ್ಲಿ ವಿವಿಧ ದೇಶಗಳ ಕ್ರಿಕೆಟಿಗರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಪಾಕ್ ಪ್ರವಾಸವನ್ನು ಕೈಗೊಳ್ಳಲಿವೆ. ಪಾಕಿಸ್ತಾನದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದು ತಿಳಿಸಿದರು.

ಭಾರತ ಈ ಟೂರ್ನಿಯಲ್ಲಿ ಭಾಗಿಯಾಗದಿದ್ದರೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಭಾಗವಹಿಸುವುದಿಲ್ಲ ಎಂದು ಪಿಸಿಬಿ ಹೇಳಿದೆ.  ಆದರೆ ಪಿಸಿಬಿಯ ಎಚ್ಚರಿಕೆಗಳಿಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2012ರಿಂದ ದ್ವಿಪಕ್ಷೀಯ ಸರಣಿಯಿಂದ ದೂರ ಉಳಿದಿರುವ  ಟೀಂ ಇಂಡಿಯಾ ಐಸಿಸಿ, ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ.

 

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • ಪ್ರಮುಖ ಸುದ್ದಿ

    ಭಾನುವಾರ ರಾಶಿ ಭವಿಷ್ಯ

    By

    ಈ ರಾಶಿಯವರಿಗೆ ಆಕಸ್ಮಿಕ ಹಣ ಲಾಭ ಗಳಿಸುವ ಸಾಧ್ಯತೆ ಇದೆ! ಉದ್ಯೋಗದಲ್ಲಿ ಅಡಚಣೆ ಸಂಭವ! ಭಾನುವಾರರಾಶಿ ಭವಿಷ್ಯ -ಮೇ-16,2021 ಸೂರ್ಯೋದಯ: 05:52...

  • ದಾವಣಗೆರೆ

    ದಾವಣಗೆರೆ: ಮೇ. 20ಕ್ಕೆ ಭದ್ರಾ ನಾಲೆ ನೀರು ಸ್ಥಗಿತ

    By

    ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಡಾ ಮುಂದೂಡಿ, ಮೇ.20 ರವರೆಗೆ ನೀರು ಹರಿಸಲು ನಿರ್ಧರಿಸಿದೆ ಎಂದು ಭದ್ರಾ ಕಾಡಾ...

  • ಪ್ರಮುಖ ಸುದ್ದಿ

    ಶನಿವಾರ ರಾಶಿ ಭವಿಷ್ಯ

    By

    ಈ ರಾಶಿಯವರಿಗೆ ಕುಟುಂಬದೊಂದಿಗೆ ವಿರಸ ಮನಸ್ತಾಪ ಕಂಡುಬರಲಿದೆ! ಹಣಕಾಸಿನ ತೊಂದರೆ ನಿವಾರಣೆಯಾಗಲಿದೆ! ಶನಿವಾರ ರಾಶಿ ಭವಿಷ್ಯ-ಮೇ-15,2021 ಸೂರ್ಯೋದಯ: 05:53 AM, ಸೂರ್ಯಸ್ತ:...

  • ಪ್ರಮುಖ ಸುದ್ದಿ

    ಶುಕ್ರವಾರ ರಾಶಿ ಭವಿಷ್ಯ

    By

    ಶುಕ್ರವಾರ ರಾಶಿ ಭವಿಷ್ಯ ಮೇ-14,2021 ಪರಶುರಾಮ ಜಯಂತಿ , ಅಕ್ಷಯ ತೃತೀಯಾ , ಬಸವ ಜಯಂತಿ ಸೂರ್ಯೋದಯ: 05:53 AM, ಸೂರ್ಯಸ್ತ:...

  • ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ

    By

    ಈ ರಾಶಿಯವರ ಪತಿ-ಪತ್ನಿಯ ದುರಹಂಕಾರದಿಂದ ನಿಮ್ಮ ಭವಿಷ್ಯಕ್ಕೆ ತೊಂದರೆ! ಉದ್ಯೋಗದಲ್ಲಿ ಕಾಯಂ ಆಗುವ ಸಾಧ್ಯತೆ! ಗುರುವಾರ ರಾಶಿ ಭವಿಷ್ಯ-ಮೇ-13,2021 ಸೂರ್ಯೋದಯ: 05:53...

  • ಪ್ರಮುಖ ಸುದ್ದಿ

    ರಾಜ್ಯದಲ್ಲಿಂದು 39,998 ಕೊರೊನಾ ಪಾಸಿಟಿವ್; 517 ಸಾವು

    By

    ಬೆಂಗಳೂರು: ರಾಜ್ಯದಲ್ಲಿಂದು 39998 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, 517 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಂದು 34752 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 1440621...

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top