Connect with us

Dvgsuddi Kannada | online news portal | Kannada news online

ಔಷಧಿಯ ಗುಣವುಳ್ಳ ಪಾಲಕ್ ಸೊಪ್ಪು ತಿನ್ನುವುದರಿಂದ ಏನು ಉಪಯೋಗ ಗೊತ್ತಾ ..?

ಆರೋಗ್ಯ

ಔಷಧಿಯ ಗುಣವುಳ್ಳ ಪಾಲಕ್ ಸೊಪ್ಪು ತಿನ್ನುವುದರಿಂದ ಏನು ಉಪಯೋಗ ಗೊತ್ತಾ ..?

ಪಾಲಕ್ ಸೊಪ್ಪು, ದಿನನಿತ್ಯ ನಮಗೆ ಸುಲಭವಗಿ ಕೈಗೆ ಸಿಗುವ ಸೊಪ್ಪು. ಈ ಸೊಪ್ಪಿನಿಂದ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಅಷ್ಟೇ ಅಲ್ಲ ಇದರಲ್ಲಿ ಆರೋಗ್ಯ ವರ್ಧನೆಯ ಅಂಶಗಳು ಸಹ ಸಾಕಷ್ಟಿವೆ. ಇಂದು ಪಾಲಕ್ ಸೊಪ್ಪಿನಿಂದ ಸಿಗುವ ಆರೋಗ್ಯ ಪ್ರಯೋಜನದ ಕೇನು ಎಂಬುದನ್ನು  ತಿಳಿಯೋಣ ಬನ್ನಿ..

ಪಾಲಕ್ ಸೊಪ್ಪನ್ನು ವಾರಕ್ಕೆ ಮೂರು ಬಾರಿ ಸೇವಿಸುವುದರಿಂದ ಆರೋಗ್ಯ ಮತ್ತು ಸೌಂದರ್ಯ ಎರಡು ಸಹ ಸಮೃದ್ಧಿಯಾಗುತ್ತದೆ.ಪಾಲಕ್ ಸೊಪ್ಪಿನಲ್ಲಿರುವ ಹೆಚ್ಚಿನ ಕಬ್ಬಿಣದ ಅಂಶವು ಕೆಂಪು ರಕ್ತಕಣಗಳ ಶಕ್ತಿಯನ್ನು ವೃದ್ಧಿಸುತ್ತದೆ. ಪಾಲಕ್ ಸೊಪ್ಪಿನ ಸೇವನೆ ಪ್ರತಿಯೊಂದು ಕೂದಲಿಗೂ ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಅಂಶ ಇರುವುದರಿಂದ ಬಿಸಿಲಿನಿಂದ ಕಪ್ಪಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರುವಲ್ಲಿ ಸಹಾಯ ಮಾಡುತ್ತದೆ.ಮುಖದ ಮೇಲಿನ ಕಪ್ಪು ಕಲೆಗಳನ್ನು ಮಾಯವಾಗಿಸುತ್ತದೆ.ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ನಾರಿನ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಔಷಧೀಯ ಗುಣಗಳಿಂದ ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುತ್ತದೆ.
ಮಲಬದ್ಧತೆ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಆರೋಗ್ಯ

To Top