Connect with us

Dvgsuddi Kannada | online news portal | Kannada news online

ಕಣ್ಣಿನ ಉರಿ ನಿಯಂತ್ರಣಕ್ಕೆ ಪರಿಹಾರ ಏನು..?

ಆರೋಗ್ಯ

ಕಣ್ಣಿನ ಉರಿ ನಿಯಂತ್ರಣಕ್ಕೆ ಪರಿಹಾರ ಏನು..?

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣಿನಲ್ಲಿ ನೋವು, ಉರಿ, ಆಯಾಸದ ಅನುಭವವಾಗುತ್ತದೆ.

ಕಣ್ಣಿನ ಬಾಹ್ಯದಲ್ಲಿ ಸಮಸ್ಯೆ ಅಥವಾ ಕಣ್ಣಿನ ಒಳಗಿನ ಸಮಸ್ಯೆ ಎರಡೂ ಕಣ್ಣಿನ ನೋವು, ಉರಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಗಂಭೀರ ಖಾಯಿಲೆಯೂ ಇದಕ್ಕೆ ಕಾರಣವಾಗಬಹುದು. ಕಣ್ಣು ನೋವು ಮಾಮೂಲಿಯಾಗಿದ್ದರೆ ಕೆಲವೊಂದು ಮನೆ ಮದ್ದಿನ ಮೂಲಕ ನೋವನ್ನು ಕಡಿಮೆ ಮಾಡಬಹುದು.

ಕಣ್ಣಿನ ನೋವಿಗೆ ರೋಸ್ ವಾಟರ್ ಬಹಳ ಪ್ರಯೋಜನಕಾರಿ. ರಾತ್ರಿ ಮಲಗುವ ಮೊದಲು ಕಣ್ಣಿನ ಮೇಲೆ ರೋಸ್ ವಾಟರ್ ಸವರಿ ಮಲಗಬೇಕು. ರೋಸ್ ವಾಟರ್ ನಿಂದ ಕಣ್ಣು ತೊಳೆಯಬಹುದು.

ಕಣ್ಣಿನ ನೋವನ್ನು ಕಡಿಮೆ ಮಾಡಲು ಸೌತೆಕಾಯಿ ಸಹಾಯ ಮಾಡುತ್ತದೆ. ಸೌತೆಕಾಯಿಯನ್ನು ಕತ್ತರಿಸಿ ಫ್ರಿಜ್ ನಲ್ಲಿಡಿ. ಅದು ತಂಪಾದಾಗ ಕಣ್ಣುಗಳನ್ನು ಮುಚ್ಚಿ ಮತ್ತು ಕಣ್ಣಿನ ಮೇಲೆ ಇರಿಸಿ. ಸ್ವಲ್ಪ ಸಮಯದವರೆಗೆ ಇರಲಿ.

ಆಲೂಗಡ್ಡೆ ಚೂರುಗಳನ್ನು ಸೌತೆಕಾಯಿಗಳಂತೆ ಕಣ್ಣುಗಳ ಮೇಲೆ ಇಡಬಹುದು.ಇದು ಕಣ್ಣಿಗೆ ವಿಶ್ರಾಂತಿ ನೀಡುತ್ತದೆ. ಆಲೂಗಡ್ಡೆ ರಸವನ್ನು ಕೂಡ ಕಣ್ಣಿಗೆ ಹಚ್ಚಬಹುದು.

ದಾಳಿಂಬೆ ಎಲೆಗಳು ಕೂಡ ಕಣ್ಣು ನೋವಿಗೆ ಪರಿಣಾಮಕಾರಿ. ಎಲೆಗಳನ್ನು ಪುಡಿ ಮಾಡಿ ಕಣ್ಣಿನ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಕಣ್ಣನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

ಉಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ. ಬಟ್ಟೆಯನ್ನು ಈ ನೀರಿನಲ್ಲಿ ಅದ್ದಿ ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ದಿನಕ್ಕೆ ಎರಡು ಮೂರು ಬಾರಿ ಮಾಡಿದ್ರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.

ತಣ್ಣನೆಯ ಹಾಲು ಕೂಡ ಕಣ್ಣಿನ ಉರಿ ನಿವಾರಿಸುತ್ತದೆ. ಕಣ್ಣುಗಳ ಮೇಲೆ ತಣ್ಣನೆ ಹಾಲಿನಿಂದ ಮಸಾಜ್ ಮಾಡಬಹುದು

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಆರೋಗ್ಯ

To Top