Connect with us

Dvgsuddi Kannada | online news portal | Kannada news online

ಬಾವುಟ ಕಟ್ಟುವ ವಿಚಾರಕ್ಕೆ ಮಾತಿನ ಚಕಮಕಿ

Home

ಬಾವುಟ ಕಟ್ಟುವ ವಿಚಾರಕ್ಕೆ ಮಾತಿನ ಚಕಮಕಿ

ಡಿವಿಜಿ ಸುದ್ದಿ, ಹರಿಹರ :  ನಗರದ  ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿ ಈದ್ ಮಿಲಾದ್ ಹಬ್ಬದ  ಪ್ರಯುಕ್ತ  ಬಾವುಟ, ಬಂಟಿಂಗ್ಸ್, ಬಟ್ಟೆಯ ತೋರಣ ತೆರವುಗೊಳಿಸುವ ವಿಚಾರಕ್ಕೆ ಎರಡು ಕೋಮುಗಳ ಮಧ್ಯೆ  ಮಾತಿನ ಚಕಮಕಿ, ಪೋಲಿಸರಿಂದ ಲಾಠಿ ಚಾರ್ಜ್ ನಡೆದ ಘಟನೆ ನಗರದಲ್ಲಿ ನಡೆದಿದೆ.

ಈದ್ ಮಿಲಾದ್ ಹಬ್ಬದ ಅಂಗವಾಗಿ ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿನ ರೇಣುಕಾ ಮಂದಿರ, ವಾಸವೀ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನಗಳ ಮುಂಭಾಗದಲ್ಲಿ ಮುಸ್ಲೀಂ ಸಮಾಜಕ್ಕೆ  ಸೇರಿದ ಬಾವುಟ, ಬಂಟಿಂಗ್ ಕಟ್ಟಲಾಗಿತ್ತು. ಈ ಭಾಗಗಳಲ್ಲಿ ಬಾವುಟ, ಬಂಟಿಂಗ್ಸ್, ತೋರಣ ಕಟ್ಟದಂತೆ ಈ ಹಿಂದೆ ಪೊಲೀಸರ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಆದರೆ ಶಾಂತಿ ಸಭೆಯ ನಿರ್ಧಾರಗಳನ್ನು ಉಲ್ಲಂಘಿಸಿ, ಮುಸ್ಲೀಂ ಸಮುದಾಯದವರು  ರಾತ್ರೋರಾತ್ರಿ ಬಾವುಟ, ಬಂಟಿಂಗ್ಸ್ ಕಟ್ಟಿದ್ದು ಹಿಂದೂ ಕೋಮಿನ ಜನರನ್ನು ಕೆರಳಿಸಿತ್ತು. ಮಾಜಿ ಶಾಸಕ ಬಿ.ಪಿ, ಹರೀಶ್ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು  ದೇವಸ್ಥಾನ ರಸ್ತೆಯಲ್ಲಿನ ಬಂಟಿಂಗ್ಸ್ ತೆರವಿಗೆ ಮುಂದಾದರು.

ಶಾಂತಿ ಸಭೆ ನಿರ್ಧಾರಗಳನ್ನು ಉಲ್ಲಂಘಿಸಿ ಈದ್ ಮಿಲಾದ್ ಹಬ್ಬಕ್ಕೆ ಕಟ್ಟಿದ್ದ ಬಾವುಟ, ಬಂಟಿಂಗ್ಸ್, ಬಟ್ಟೆಯ ತೋರಣ ತೆರವುಗೊಳಿಸುವ ವಿಚಾರಕ್ಕೆ ಎರಡು ಕೋಮುಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಬಾವುಟ, ಬಂಟಿಂಗ್ ಗಳನ್ನು ಪೊಲೀಸರು ತೆರವುಗೊಳ್ಳಿಸಲು ಮುಂದಾದಗ  ಸ್ಥಳಕ್ಕೆ ಆಗಮಿಸಿದ ಹಾಲಿ ಶಾಸಕ ಎಸ್. ರಾಮಪ್ಪ ನೇತೃತ್ವದಲ್ಲಿ ಮುಸ್ಲಿಂ ಸಮುದಾಯ ತೆರವನ್ನು ವಿರೋಧಿಸಿದರು.  ಆಗ ಹಾಲಿ ಮತ್ತು ಮಾಜಿ ಶಾಸಕರ ಮಧ್ಯೆ ವಾಗ್ವಾದ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪರಿಸ್ಥಿತಿ  ತಿಳಿಗೊಳಿಸಲು, ಕಾನೂನು ಸುವ್ಯವಸ್ಥೆ, ಶಾಂತಿ ಕಾಪಡಲು ಲಾಠಿ ಚಾರ್ಚ್ ಮಾಡಲಾಯಿತು.

ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರದಲ್ಲಿ ಶಾಂತಿ ಕಾಪಾಡುವ ಹಿತದೃಷ್ಠಿಯಿಂದ ಶನಿವಾರದಿಂದ ಭಾನುವಾರ ಬೆಳಗ್ಗೆ ೬ ಗಂಟೆಯ ವರೆಗೆ ಸೆಕ್ಷನ್ ೧೪೪ ಜಾರಿಯಲ್ಲಿರುವಂತೆ ಆದೇಶಿಸಲಾಯಿತ್ತು.

ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಎಸ್.ಪಿ ಹಾಗೂ ತಹಶಿಲ್ದಾರ್ ನೇತೃತ್ವದಲ್ಲಿ ಎರಡು ಕೋಮಿನ ಮುಖಂಡರ ಜೊತೆ ಶಾಂತಿ ಸಭೆ ನಡೆಸಿ, ಹಿಂದೂ ದೇವಾಲಯಗಳ ಮುಂಭಾಗದಲ್ಲಿ ಮತ್ತು ರಸ್ತೆಗಳಲ್ಲಿ  ಕಟ್ಟಿರುವ ಬಂಟಿಂಗ್ಸ್ ಹಾಗೂ ತೋರಣಗಳನ್ನು ಸಮುದಾಯದ ಮುಖಂಡರುಗಳ ಒಪ್ಪಿಗೆಯ ಮೇರೆಗೆ  ತೆರವುಗೊಳಿಸಬೇಕೆಂದು ತೀರ್ಮಾನಿಸಲಾಯಿತು

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

  • Home

    ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024

    By

    ಈ ರಾಶಿಯವರು ಸಿಹಿ ಸಂದೇಶಗಳ ಮೇಲೆ ಸಿಹಿ ಸಂದೇಶ ಪಡೆಯಲಿದ್ದೀರಿ, ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024 ಸೂರ್ಯೋದಯ: 06:29, ಸೂರ್ಯಾಸ್ತ :...

  • Home

    ಗುರುವಾರ- ರಾಶಿ ಭವಿಷ್ಯ ಜನವರಿ-4,2024

    By

    ಈ ರಾಶಿಗಳ ಕಿರುತೆರೆಯ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತಗಾರರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಬೆಳ್ಳಿತೆರೆಯಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಗುರುವಾರ- ರಾಶಿ ಭವಿಷ್ಯ...

  • Home

    ಮರದ ಬಾಗಿಣ ವಿಶೇಷತೆ..!

    By

    ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು. ಸೋಮಶೇಖರ ಗುರೂಜಿB.Sc ಜ್ಯೋತಿಷ್ಯರು, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.MOB.93534 88403 ೧....

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-29,2023

    By

    ಈ ರಾಶಿಯವರಿಗೆ ಬಂಧುಗಳ ಅವಹೇಳನ ಮಾತುಗಳಿಂದ ಪ್ರಗತಿಗೆ ದಾರಿದೀಪ, ಈ ರಾಶಿಯವರಿಗೆ ಒತ್ತಡದ ಮೇರೆಗೆ ಹಣ ಸ್ವೀಕಾರ, ಈ ರಾಶಿಯವರು ಚಿನ್ನಾಭರಣ...

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-22,2023

    By

    ಈ ಪಂಚ ರಾಶಿಗಳ ತುಳಸಿ ಪೂಜೆ ನಂತರ ವಿವಾಹ ಕಾರ್ಯ ನೆರವೇರುವುದು, ರಿಯಲ್ ಎಸ್ಟೇಟ್ ಉದ್ಯಮದಾರರು ಬಹು ಮುಖ್ಯವಾದ ಪ್ರಾಜೆಕ್ಟ್ ಗೆ...

Advertisement

ದಾವಣಗೆರೆ

Advertisement
To Top