ಡಿವಿಜಿ ಸುದ್ದಿ, ಹರಿಹರ : ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಸವಾರ ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಎಂಕೆಇಟಿ ಶಾಲೆ ಬಳಿ ನಡೆದಿದೆ.
ಪಾಮೇನಹಳ್ಳಿ ಗ್ರಾಮದ ನಿವಾಸಿಯಾದ ಚನ್ನಬಸವ (24) ಸಾವನ್ನಪ್ಪಿದ ಬೈಕ್ ಸವಾರ. ವೇಗವಾಗಿ ಬೈಕ್ ಚಲಾಯಿಸುತ್ತಿದ್ದರಿಂದ ರಸ್ತೆಯಲ್ಲಿದ್ದ ಹಂಪ್ಸ್ ದಾಟಿಸುವಾಗ ನಿಯಂತ್ರಣ ತಪ್ಪಿದೆ ಇದರಿಂದಾಗಿ ತಲೆಗೆ ಬಲವಾದ ಪೆಟ್ಟುಬಿದ್ದ ಹಿನ್ನಲೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



