Connect with us

Dvgsuddi Kannada | online news portal | Kannada news online

ಹರಪನಹಳ್ಳಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಮುಖಂಡರ ಸಭೆ

ಹರಪನಹಳ್ಳಿ

ಹರಪನಹಳ್ಳಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಮುಖಂಡರ ಸಭೆ

ಡಿವಿಜಿಸುದ್ದಿ. ಹರಪನಹಳ್ಳಿ:  ನಗರದ ಪ್ರವಾಸಿ ಮಂದಿರದಲ್ಲಿ ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ, ಕೂಲಹಳ್ಳಿ ಪಟ್ಟದ ಚಿನ್ಮಯಿ ಸ್ವಾಮೀಜಿ ನೇತೃತ್ವದಲ್ಲಿ ಹರಪನಹಳ್ಳಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಪೂರ್ವಭಾವಿ ಸಭೆ ನಡೆಸಲಾಯಿತು.

ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಹರಪನಹಳ್ಳಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಾಲೂಕುಗಳ ಹೋರಾಟಗಾರರ ಸಭೆ ನಡೆಸುವುದು, ವಿಜಯಜನಗರ ಜಿಲ್ಲೆ ರಚನೆಗೆ ವಿರೋಧಿಸುವುದು, ಪಶ್ಚಿಮ ತಾಲೂಕುಗಳ ಪೈಕಿ ಯಾವುದಾದರೊಂದು ತಾಲೂಕು ಜಿಲ್ಲೆಆ ಕೇಂದ್ರವನ್ನಾಗಿ ಘೋಷಿಸುವಂತೆ ಸಭೆಯಲ್ಲಿ ಚರ್ಚೆ ಆಯಿತು.

ಈ ಬಗ್ಗೆ  ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಹರಪನಹಳ್ಳಿ ಜಿಲ್ಲೆಯನ್ನಾಗಿ ಘೋಷಿಸಲು ಗಮನ ಸೆಳೆಯಲು ಅ.15 ಅಥವಾ 16 ರಲ್ಲಿ ಒಂದು ದಿನ ಶಾಸಕರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸದಸ್ಯರ ಸಭೆ ಕರೆಯುವಂತೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಹೋರಾಟಗಾರ ಹೆಚ್.ಎಂ.ಮಹೇಶ್ವರಸ್ವಾಮಿ, ಮಾತನಾಡಿ, ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿವೆ. ಹರಪನಹಳ್ಳಿಗೆ ಬಂಬಲಿಸುವಂತೆ ಮೂರು ತಾಲೂಕಿನಲ್ಲಿ ಬೈಕ್ ರ‍್ಯಾಲಿ ನಡೆಸಿ ಅಲ್ಲಿ ಸಭೆ ನಡೆಸಿದಾಗ ಅವರ ಸಹಕಾರ ದೊರೆಯುತ್ತದೆ. ಸುತ್ತ ಮುತ್ತಲಿನ ಎಲ್ಲಾ ತಾಲೂಕಿನ ಶಾಸಕರ ಹಾಗೂ ಹೋರಾಟಗಾರರ ಮನವೊಲಿಸಬೇಕಿದೆ ಎಂದರು.

ಹೋರಾಟಗಾರರಾದ ಇದ್ಲಿ ರಾಮಪ್ಪ, ಮಾತನಾಡಿ,  ತುರ್ತಾಗಿ ಸ್ಥಳೀಯ ಶಾಸಕರು ಸಿಎಂ ಬಳಿ ನಿಯೋಗ ತೆಗೆದುಕೊಂಡು ಹೋಗಬೇಕು. ಶಾಸಕರು ಅಖಂಡ ಬಳ್ಳಾರಿ ಜಿಲ್ಲೆಯೋ, ಹರಪನಹಳ್ಳಿ ಜಿಲ್ಲೆಯೋ ಸ್ಪಷ್ಟವಾಗಿ ನಿರ್ಧಾರ ಪ್ರಕಟಿಸಬೇಕು. ಶಾಸಕರು ಹೋರಾಟದ ನೇತೃತ್ವವಹಿಸಿಕೊಳ್ಳಬೇಕು. ಶಾಸಕರು ಬಳ್ಳಾರಿಯಲ್ಲಿ ಕುಳಿತು ಹರಪನಹಳ್ಳಿ ಜಿಲ್ಲೆಯಾಗಲಿ  ಎನ್ನುತ್ತಿದ್ದಾರೆ. ಶಾಸಕರು ಹೋರಾಟಕ್ಕೆ ಬಾರದಿದ್ದರೆ ಅವರ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಬೇಕು ಎಂದರು.

ಹಡಗಲಿ ಕಸಾಪ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ ಮಾತನಾಡಿ, ಹೊಸಪೇಟೆಗಿಂತ ಹಡಗಲಿ ಭೌಗೋಳಿಕವಾಗಿದೆ ದೊಡ್ಡದಿದೆ. ವಿಜಯನಗರ ಹೊರತುಪಡಿಸಿ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಯಾವುದಾದರೂ ಜಿಲ್ಲೆಯಾದರೂ ಸಹಮತವಿದೆ. ಅಭಿವೃದ್ಧಿ ಹೊಂದಿರುವ ಹೊಸಪೇಟೆ ಜಿಲ್ಲೆ ಆಗುವುದು ಬೇಡ. ವಿಮಾನದಲ್ಲಿ ಸ್ವಾಮೀಜಿಗಳನ್ನು ಕರೆದುಕೊಂಡು ಹೋಗುವ ರಾಜಕಾರಣಿಗಳ ಸ್ವಾರ್ಥವನ್ನು ಬಲವಾಗಿ ಖಂಡಿಸಬೇಕಿದೆ. ನಂಜುಂಡಪ್ಪ ವರದಿ ಅನ್ವಯ 60 ಕಿ.ಮೀ ಅಂತರದಲ್ಲಿ ಜಿಲ್ಲೆಯನ್ನು ರಚಿಸಬಾರದು ಎಂದು ಹೇಳಲಾಗಿದೆ. ಹೀಗಾಗಿ ಧರ್ಮಗುರುಗಳ ಸಾನಿಧ್ಯದಲ್ಲಿ ಸಮಿತಿ ರಚಿಸಿಕೊಂಡು ಪ್ರಬಲವಾದ ಹೋರಾಟ ನಡೆದಾಗ ಮಾತ್ರ ಪಶ್ಚಿಮ ತಾಲೂಕುಗಳಿಗೆ ನ್ಯಾಯ ಸಿಗುಲು ಸಾಧ್ಯ ಎಂದು ಪ್ರತಿಪಾದಿಸಿದರು.

ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್ ಮಾತನಾಡಿ, ಹೋರಾಟಕ್ಕೆ ಬೆಂಬಲ ನೀಡಲಾಗುವುದು  ಹಾಗೂ ಸಿಎಂ ಬಳಿ ನಿಯೋಗ ತೆಗೆದುಕೊಂಡು ಹೋಗಲು ಸಮಯ ತೆಗೆದುಕೊಳ್ಳುತ್ತೇವೆ ಎಂದು ಶಾಸಕರು ತಿಳಿಸಿದ್ದಾರೆ ಎಂದರು.

ಸಭೆಯಲ್ಲಿ ಪ್ರೊ.ಎಂ.ತಿಮ್ಮಪ್ಪ, ದೊಡ್ಡಮನೆ ಪ್ರಸಾದ್, ಬಸವರಾಜ್ ಹುಲಿಯಪ್ಪನವರ್ , ಡಿ.ಅಬ್ದುಲ್ ರಹಿಮಾನಸಾಬ್, ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್, ಚಿಕ್ಕೇರಿ ಬಸಪ್ಪ, ಶಿಕಾರಿ ಬಾಲಪ್ಪ, ವೆಂಕಟೇಶರೆಡ್ಡಿ, ಓ.ರಾಮಪ್ಪ, ಓಂಕಾರಗೌಡ, ಕಾನಹಳ್ಳಿ ರುದ್ರಪ್ಪ, ಹೆಚ್.ಎಂ.ಅಶೋಕ್, ಹೆಚ್.ಎಂ.ಜಗದೀಶ್, ಎಂ.ಪಿ.ವೀಣಾ ಮಹಾಂತೇಶ್, ಪುಣಬಗಟ್ಟಿ ನಿಂಗಪ್ಪ ಸಣ್ಣಅಜ್ಜಯ್ಯ, ಕುಂಚೂರು ಮಹಬೂಬ್‌ಸಾಬ್, ಬಸವರಾಜ್, ನಿಚ್ಚವ್ವನಹಳ್ಳಿ ಭೀಮಪ್ಪ, ಪಿ.ಶಿವಕುಮಾರನಾಯ್ಕ, ಕೆ.ನಂದೀಶ, ವೆಂಕಟೇಶ್, ನಿಚ್ಚವ್ಬನಹಳ್ಳಿ ಅನಂದ್, ಕೆ.ಕಲ್ಲಹಳ್ಳಿ ಗೋಣ್ಯೆಪ್ಪ, ಎಸ್.ಪಿ.ಲಿಂಬ್ಯಾನಾಯ್ಕ, ಮೇಘರಾಜ್, ತ್ರಿವೇಣಿ, ಶೃಂಗಾರದೋಟ ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.

 

 

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top