ಡಿವಿಜಿ ಸುದ್ದಿ, ಬೆಂಗಳೂರು: ನನ್ನ ಮಗಳು ರಾಗಿಣಿ ಮೇಲಿನ ಡ್ರಗ್ಸ್ ಆರೋಪಗಳೆಲ್ಲ ಸುಳ್ಳು. ನನ್ನ ಮಗಳು ಯಾವುದೇ ತಪ್ಪೇ ಮಾಡಿಲ್ಲ. ಆರೋಪ ಮುಕ್ತವಾಗಿ ಬರುತ್ತಾಳೆ ಎಂದು ರಾಗಿಣಿ ತಾಯಿ ಹೇಳಿದ್ದಾರೆ.
ನಟಿ ರಾಗಿಣಿ ಭೇಟಿ ಮಾಡಲು ಬೆಳಗ್ಗೆಯಿಂದಲೇ ಕಾದು ಕುಳಿತಿದ್ದ ಪೋಷಕರಿಗೆ ಸಿಸಿಬಿ ಪೊಲೀಸರು ಅವಕಾಶ ನೀಡಿರಲಿಲ್ಲ. ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನನ್ನ ಮಗಳ ಮೇಲಿನ ಆರೋಪಗಳು ಶುದ್ಧ ಸುಳ್ಳು. ಅವರು ಯಾವುದೇ ತಪ್ಪು ಮಾಡಿಲ್ಲ. ಅವಳನ್ನು ಜನರು ಟ್ರ್ಯಾಪ್ ಮಾಡಿದ್ದಾರೆ ಎಂದರು.
ಈ ಬಗ್ಗೆ ನನ್ನ ಬಳಿ ದಾಖಲೆ ಗಳಿವೆ. ಬೇಕಾದರೆ ದಾಖಲೆ ಬಹಿರಂಗಪಡೆಸುತ್ತೇನೆ ಎಂದು ಹೇಳಿದರು.



