Connect with us

Dvg Suddi-Kannada News

ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯನಿಂದ ವಾಹನ ಪಾಸ್ ದುರ್ಬಳಕೆ: ಪಾಸ್ ಸೀಜ್ , ಕಾರು ವಶ

ಪ್ರಮುಖ ಸುದ್ದಿ

ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯನಿಂದ ವಾಹನ ಪಾಸ್ ದುರ್ಬಳಕೆ: ಪಾಸ್ ಸೀಜ್ , ಕಾರು ವಶ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ‌ ಪೊಲೀಸ್ ಇಲಾಖೆ ನೀಡುವ ವಾಹನದ ಪಾಸ್ ಮಾದರಿಯಲ್ಲಿ ನಕಲಿ ಪಾಸ್ ಸೃಷ್ಟಿಸಿಕೊಂಡು ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ಪೊಲೀಸರು ಪಾಸ್ ಸೀಜ್ ಮಾಡಿ, ಕಾರನ್ನು ವಶ ಪಡಿಸಿಕೊಂಡಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ 41 ವಾರ್ಡ್ ಸದಸ್ಯ ಕಲ್ಲಳ್ಳಿ ನಾಗರಾಜ್ ಅವರು, ವಾಹನ ಪಾಸ್ ದುರ್ಬಳಕೆ ಮಾಡಿಕೊಂಡು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಪಾಲಿಕೆ ಸದಸ್ಯರ ಪಾಸ್ ಇದ್ದರೂ, ಪೊಲೀಸ್ ಇಲಾಖೆ ಅಗತ್ಯ ವಸ್ತುಗಳ ಸರಬರಾಜಿಗೆ ನೀಡುವ ಪಾಸ್ ಮಾದರಿಯಲ್ಲಿ ನಕಲಿ ಪಾಸ್ ತಯಾರಿಸಿಕೊಂಡು, ಪಾಸ್ ನಲ್ಲಿ ವಾಹನ ನಂಬರ್ ಇಲ್ಲದೆ ಕಾರು ಚಾಲನೆ ಮಾಡುತ್ತಿದ್ದರು.

ಬೇರೊಬ್ಬರ ಕಾರಿಗೆ ಪೆಟ್ರೊಲ್ ಹಾಕಿಸಿಕೊಳ್ಳಲು ಪಾಸ್ ಬಳಕೆ ಆರೋಪ.‌ ನಗರದ ಕೆಇಬಿ ವೃತ್ತದಲ್ಲಿ ವಾಹನಗಳ ತಪಾಸಣೆ ವೇಳೆ ಅನಧಿಕೃತ ಪಾಸ್ ಸೀಜ್. ತಪ್ಪಯಾಯ್ತು ಬಿಟ್ಟು ಬಿಡಿ ಎಂದು ಕೇಳಿಕೊಂಡರೂ, ಪಾಸ್ ಸೀಜ್ ಮಾಡಿದ ಪೊಲೀಸರು, ಕಾರನ್ನು ಪೊಲಿಸರು ವಶಕ್ಕೆ ಪಡೆದುಕೊಂಡರು. ಇದರಿಂದ ಪಾಲಿಕೆಗೆ ನಡೆದುಕೊಂಡೇ ಹೋದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top