ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದಿಂದ ಮಾಜಿ ಸಚಿವ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ನಿವಾಸದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಸನ್ಮಾನಿಸಲಾಯಿತು.
ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂಬುದನ್ನು ತಮ್ಮ ಸಾಧನೆ ಮೂಲಕವೇ ಸಾಧಿಸಿ ತೋರಿಸಿದ್ದಾರೆ. ಮಹಿಳೆಯರು ಪುರುಷನಿಗೆ ಸರಿ ಸಮಾನರು ಎಂದು ಶಾಮನೂರು ಶಿವಶಂಕರಪ್ಪ ಅವರು ಅಭಿಪ್ರಾಯಪಟ್ಟರು.
ಸನ್ಮಾನಿತರು: ದೇವಿಕಾ ಸುನಿಲ್, ರೇವತಿನಾಯಕ್, ಕಾವ್ಯ ಕೆ, ಮತ್ತೂರಮ್ಮ, ಮಾಳಮ್ಮ, ಮೀನಾಕ್ಷಿ, ಪುಷ್ಬಲತಾ, ಚೇತನಾ, ಶೀಲಾ ಅವರನ್ನು ಸನ್ಮಾನಿಸಲಾಯಿತು.

ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಮಹಿಳಾ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಹಾಂತೇಶ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಾಗರ್ ಎಲ್. ಎಂ. ಎಚ್, ಮಹಿಳಾ ನಗರ ಪಾಲಿಕೆ ಸದಸ್ಯ ಸವಿತಾ ಹುಲ್ಮನಿ, ಆಶಾ ಹಮ್ಮಣ್ಣ, ಸುಧಾ ಮಂಜುನಾಥ್, ಯುವರಾಜ್ ಶುಭಮಂಗಲ ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.



