Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು 3 ಕೊರೊನಾ ಪ್ರಕರಣ; 71 ಸೋಂಕಿತರು, 65 ಸಕ್ರಿಯ, 404 ವರದಿ ಬಾಕಿ

ಪ್ರಮುಖ ಸುದ್ದಿ

ದಾವಣಗೆರೆ: ಇಂದು 3 ಕೊರೊನಾ ಪ್ರಕರಣ; 71 ಸೋಂಕಿತರು, 65 ಸಕ್ರಿಯ, 404 ವರದಿ ಬಾಕಿ

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಇಂದು ಮೂರು ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಈ ಮೂವರು ಜಾಲಿನಗರ ನಿವಾಸಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೋಗಿ ಸಂಖ್ಯೆ 33 ವರ್ಷದ ಪುರುಷ ರೋಗಿ ಸಂಖ್ಯೆ 662 ರ ಸಂಪರ್ಕ ಹೊಂದಿದ್ದಾರೆ. 30 ವರ್ಷದ ಮಹಿಳೆ 663 ರ ಪ್ರಾಥಮಿಕ ಸಂಪರ್ಕ ಹೊಂದಿದ್ದು, 56 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 667 ರ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂದರು
ಇಂದು 240 ಗಂಟಲುದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು ಒಟ್ಟು 404 ವರದಿ ಬಾಕಿ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 65 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಸ್‍ಎಸ್ ಆಸ್ಪತ್ರೆಯ ಲ್ಯಾಬ್‍ಗೆ ಅವಶ್ಯಕವಾದ ಲಾಜಿಸ್ಟಿಕ್ ಪೂರೈಕೆ ಇಂದು ಆಗಿದ್ದು ಪರೀಕ್ಷೆಗೆ ಎಲ್ಲ ತಯಾರಿ ನಡೆಸಿಕೊಳ್ಳುತ್ತಿದೆ. ತಯಾರಿ ಪೂರ್ಣಗೊಂಡಲ್ಲಿ ನಾಳೆಯಿಂದಲೇ ಸುಮಾರು 100 ರಿಂದ 150 ಸ್ಯಾಂಪಲ್ ಪರೀಕ್ಷೆಗೆ ಸಿದ್ಧವಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ ಕೊರೊನಾ ಪಾಸಿಟಿವ್ ರೋಗಿಗಳ ಮತ್ತು ಐಸೋಲೇಷನ್‍ನಲ್ಲಿರುವ ವ್ಯಕ್ತಿಗಳ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಆಯುಷ್ ಇಲಾಖೆಯ ಖಾದ್ಯಗಳು, ಸಿರಪ್‍ಗಳನ್ನು ನೀಡಲಾಗಿತ್ತಿದೆ ಜೊತೆಗೆ ಮೈಸೂರಿನ ಸಿಎಫ್‍ಟಿಆರ್‍ಐ ನಿಂದ ಪೌಷ್ಟಿಕಾಂಶ ಭರಿತ ಮತ್ತು ವಿಟಮಿನ್ ಸಿ ಹಾಗೂ ಎ ಉಳ್ಳ ಮ್ಯಾಂಗೋ ಬಾರ್‍ಗಳು ಮತ್ತು ಸಮುದ್ರದ ಪಾಚಿ ಅಂಶವುಳ್ಳ ಸ್ಪಿರುಲಿನಾ ಚಿಕ್ಕಿಯನ್ನು ತರಿಸಿಕೊಂಡು ಇವರಿಗೆ ನೀಡಲು ಆ ಸಂಸ್ಥೆಯಿಂದ ಈಗಾಗಲೇ ದರಪಟ್ಟಿ ಆಹ್ವಾನಿಸಲಾಗಿದೆ. ಈ ರೀತಿಯಾಗಿ ರೋಗಿಗಳನ್ನು ಗುಣಮುಖವಾಗುವತ್ತ ಹೆಜ್ಜೆ ಇಡಲಾಗಿದೆ ಎಂದರು.

ಕೋವಿಡ್ ಆಸ್ಪತ್ರೆಯಲ್ಲಿರುವ ಬಹಳಷ್ಟು ಜನರು ಗುಣಮುಖರಾಗುತ್ತಿದ್ದಾರೆ. ರೋಗಿ ಸಂಖ್ಯೆ 533 ರ ಚಿಕಿತ್ಸೆ ನಾಳೆಗೆ 14 ದಿನ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಎರಡನೇ ಬಾರಿಯ ಸ್ವಾಬ್ ಟೆಸ್ಟ್‍ಗೆ ಕಳುಹಿಸಲಾಗುವುದು. ಸಕ್ರಿಯವಾಗಿರುವ ಎಲ್ಲ ಕೊರೊನಾ ರೋಗಿಗಳು ಗುಣಮುಖರಾಗುವ ವಿಶ್ವಾಸ ಇದೆ ಎಂದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top